ಬೆಂಗಳೂರು: ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಂದ್ರು ಕೊಲೆ ಪ್ರಕರಣದಲ್ಲಿ ಗೃಹಮಂತ್ರಿ ಆರಗ ಜ್ಞಾನೇಂದ್ರ ನೀಡಿದ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇಂದು ಯೂತ್ ಕಾಂಗ್ರೆಸ್ ವತಿಯಿಂದ ಗೃಹಮಂತ್ರಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೇಂದ್ರ ವಿಭಾಗ ಡಿಸಿಪಿಗೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ದೂರು ನೀಡಿದ್ದಾರೆ.
'ಆರಗ ಜ್ಞಾನೇಂದ್ರ ಚಿಕ್ಕ ಮಗುವಲ್ಲ': ಪೊಲೀಸರಿಗೆ ನಲಪಾಡ್ ದೂರು - ಆರಗ ಜ್ಞಾನೇಂದ್ರ ವಿರುದ್ಧ ದೂರು ನೀಡಿದ ನಲಪಾಡ್
ಪೂರ್ತಿ ಜ್ಞಾನ ಇರಬೇಕು ಇಲ್ಲವೇ ಜ್ಞಾನವೇ ಇರಬಾರದು. ಆದರೆ, ಆರಗ ಅವರಿಗೆ ಅರ್ಧ ಜ್ಞಾನ ಇದೆ ಎಂದು ನಲಪಾಡ್ ಕಿಡಿಕಾರಿದರು.
ಆರಗ ಜ್ಞಾನೇಂದ್ರ ಚಿಕ್ಕ ಮಗುವಲ್ಲ ಎಂದ ಕಾಂಗ್ರೆಸ್ ಯುವ ಮುಖಂಡ ನಲಪಾಡ್
ಇದನ್ನೂ ಓದಿ:ಚಾಮರಾಜಪೇಟೆ ಬಂದ್ ಸಂಪೂರ್ಣ ವಿಫಲ: ಶಾಸಕ ಜಮೀರ್
ಈ ವೇಳೆ ಮಾತನಾಡಿದ ನಲಪಾಡ್, ಪೂರ್ತಿ ಜ್ಞಾನ ಇರಬೇಕು ಇಲ್ಲವೇ ಜ್ಞಾನವೇ ಇರಬಾರದು. ಆದರೆ, ಆರಗ ಅವರಿಗೆ ಅರ್ಧ ಜ್ಞಾನ ಇದೆ. ಆರಗ ಜ್ಞಾನೇಂದ್ರ ಚಿಕ್ಕ ಮಗುವಲ್ಲ, ಪದೇ ಪದೇ ಹೇಳಿಕೆ ಬದಲಿಸುವುದಕ್ಕೆ. ಆರಗ ಜ್ಞಾನೇಂದ್ರ ಮೂರನೇ ಬಾರಿಗೆ ಈ ತರಹದ ಸ್ಟೇಟ್ ಮೆಂಟ್ ಕೊಡ್ತಿದ್ದಾರೆ. ರಾಜ್ಯದ ಕೋಮು ಸಾಮರಸ್ಯ ಹಾಳು ಮಾಡುವ ಕೆಲಸವನ್ನ ಮಾಡಿದ್ದಾರೆ. ಆರಗ ಜ್ಞಾನೇಂದ್ರ ಮೇಲೆ ಎಫ್ಐಆರ್ ಮಾಡಬೇಕು. ಸಚಿವ ಸ್ಥಾನದಿಂದ ವಜಾ ಮಾಡಬೇಕು ಅಂತಾ ದೂರು ನೀಡಿದ್ದೇವೆ ಎಂದು ತಿಳಿಸಿದರು.