ಬೆಂಗಳೂರು: ನಗರದಲ್ಲಿ ಇಂದು ಮುಂಜಾನೆಯೇ ಭಕ್ತರು ನಾಗರ ಕಟ್ಟೆಗಳಿಗೆ ತೆರಳಿ ನಾಗರಪಂಚಮಿ ಪ್ರಯುಕ್ತ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಾಡಿನಾದ್ಯಂತ ನಾಗರಪಂಚಮಿ ಸಂಭ್ರಮ: ನಾಗರ ಕಲ್ಲಿಗೆ ಪೂಜೆ
ಇಂದು ನಾಡಿನಾದ್ಯಂತ ನಾಗರಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ನಾಗರ ಕಟ್ಟೆಗಳಿಗೆ ತೆರಳಿ ಭಕ್ತಿ ಭಾವದಿಂದ ಜನರು ಪೂಜೆ ಸಲ್ಲಿಸಿದರು.
ನಾಗರ ಪಂಚಮಿ
ನಗರವಾಸಿಗಳು ಅದೆಷ್ಟು ಬ್ಯುಸಿ ಇದ್ದರು ಹಬ್ಬ ಹರಿದಿನ ಅಂದರೆ ಸಾಕು ಮೊದಲ ಸಾಲಿನಲ್ಲಿ ಇರ್ತಾರೆ. ಮುಂಜಾನೆಯೇ ಭಕ್ತರು ನಾಗರ ಕಟ್ಟೆಗಳಲ್ಲಿ ನಾಗ ದೇವತೆಗಳ ವಿಗ್ರಹಕ್ಕೆ ಹಾಲು, ಮೊಸರು, ಎಳ್ಳು ಉಂಡೆ, ಪಂಚ ಗವ್ಯಗಳನ್ನು ನೈವೇದ್ಯವಾಗಿ ಅರ್ಪಿಸಿದರು.
ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲಿಕಾರ್ಜುನ ದೇವಲಯದ ನಾಗರ ಕಟ್ಟೆಯಲ್ಲಿ ಸಂಭ್ರದಿಂದ ನಾಗರಪಂಚಮಿ ಆಚರಣೆ ಮಾಡಲಾಯಿತು. ಕಿರಿಯರಿಂದ ಹಿರಿಯರವರೆಗೆ ಎಲ್ಲರೂ ಸೇರಿ ನಾಗ ದೇವತೆಗಳ ಆರಾಧನೆಯಲ್ಲಿ ನಿರತರಾಗಿದ್ದರು.