ಬೆಂಗಳೂರು: ನಾಡಿನೆಲ್ಲೆಡೆ ನಾಗರ ಪಂಚಮಿ ಸಂಭ್ರಮ, ಸಡಗರ. ಕೊರೊನಾ ಆತಂಕದ ನಡುವೆಯೇ ನಾಗರ ಪಂಚಮಿಯ ದಿನವಾದ ಇಂದು ಎಲ್ಲಾ ನಾಗ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಬೆಂಗಳೂರು: ಕೊರೊನಾ ಆತಂಕದ ನಡುವೆ ನಾಗರ ಪಂಚಮಿ ಆಚರಣೆ - ಬೆಂಗಳೂರು
ಬೆಂಗಳೂರಿನ ಹಲವು ದೇವಾಲಯಗಳ ಬಳಿ ಇರುವ ನಾಗರಕಟ್ಟೆಗೆ ತೆರಳಿ ಮಹಿಳೆಯರು ಹಾಗೂ ಕುಟುಂಬದ ಸದಸ್ಯರು ಬೆಳ್ಳಂಬೆಳಗ್ಗೆಯೇ ಕಲ್ಲು ನಾಗನಿಗೆ ಹಾಲೆರೆದು ಕುಟುಂಬದ ಸಮೃದ್ಧಿಯನ್ನು ಕಾಪಾಡು ಎಂದು ಪ್ರಾರ್ಥಿಸಿದ್ದಾರೆ.
ಶ್ರಾವಣ ಶುದ್ಧ ಪಂಚಮಿಯಂದು ಆಚರಿಸುವ ಹಬ್ಬ ಇದಾಗಿದೆ. ನಾಗರ ಕಲ್ಲಿಗೆ, ಹುತ್ತಗಳಿಗೆ ವಿಶೇಷ ಪೂಜೆ, ಹಾಲಿನ ಅಭಿಷೇಕ ಮಾಡುವ ಮೂಲಕ ನಾಗರ ಪಂಚಮಿಯನ್ನು ಸಡಗರ ಸಂಭ್ರಮದಿಂದ ಜನರು ಆಚರಿಸಿದರು. ನಾಗ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ಬೆಂಗಳೂರಿನ ಹಲವು ದೇವಾಲಯಗಳ ಬಳಿ ಇರುವ ನಾಗರಕಟ್ಟೆಗೆ ತೆರಳಿ ಮಹಿಳೆಯರು ಹಾಗೂ ಕುಟುಂಬದ ಸದಸ್ಯರು ಬೆಳ್ಳಂಬೆಳಗ್ಗೆಯೇ ಹಾಲೆರೆದು, ಪೂಜಿಸಿ ಸಂತಾನ ಮತ್ತು ಕುಟುಂಬದ ಸಮೃದ್ಧಿಯನ್ನು ಕಾಪಾಡು ಎಂದು ಪ್ರಾರ್ಥಿಸಿದ್ದಾರೆ.
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಗಳಿಗೆ ಆಗಮಿಸಿಲ್ಲ. ಕೆಲವು ಮಂದಿ ಮಾಸ್ಕ್ ಹಾಕಿಕೊಂಡೇ ಪೂಜೆ ಪುನಸ್ಕಾರದಲ್ಲಿ ತೊಡಗಿದ್ದರು. ಇಂದು ಮೊದಲ ಶ್ರಾವಣ ಶನಿವಾರ ಆಗಿರುವ ಕಾರಣ ಕೋರಮಂಗಲದ ಕಲ್ಯಾಣ ವೆಂಕಟೇಶ್ವರ ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆ ಕೂಡ ನೆರವೇರಿಸಲಾಗಿದೆ.