ಕರ್ನಾಟಕ

karnataka

ETV Bharat / state

ನಾಡೋಜ ಡಾ.ಎಂ.ಚಿದಾನಂದಮೂರ್ತಿ ಅವರ 90ನೇ ವರ್ಷದ ಜನ್ಮದಿನ ಸ್ಮರಣೆ - ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ

ಮೇ 10, 1931 ಚಿದಾನಂದಮೂರ್ತಿಯವರ ಜನ್ಮದಿನ. ಕೊರೊನಾ ಸಂಕಷ್ಟ ಕಾಲ ಇರದೇ ಇದ್ದಿದ್ದರೆ ಇಂದು ನಾಡಿನ ತುಂಬಾ ಅವರ ಕುರಿತಾದ ವಿಚಾರಧಾರೆ ಮಂಥನ ಕಾರ್ಯಕ್ರಮಗಳು ಜರುಗುತ್ತಿದ್ದವು..

Nadoja Dr. M Chidananda murthy
ನಾಡೋಜ ಡಾ.ಎಂ.ಚಿದಾನಂದಮೂರ್ತಿ

By

Published : May 10, 2021, 12:44 PM IST

ಬೆಂಗಳೂರು: ಖ್ಯಾತ ಸಂಶೋಧಕರಾದ ನಾಡೋಜ ಡಾ.ಎಂ.ಚಿದಾನಂದಮೂರ್ತಿಯವರು ಸಾಹಿತಿಗಳಾಗಿ ಸಂಶೋಧಕರಾಗಿ ಕನ್ನಡ ಚಳವಳಿ ಹೋರಾಟಗಾರರಾಗಿ ನಾಡು, ನುಡಿಗಾಗಿ ಸಲ್ಲಿಸಿದ ಅಭೂತಪೂರ್ವ ಕೊಡುಗೆ ಅವಿಸ್ಮರಣೀಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಅವರು ಸ್ಮರಿಸಿದ್ದಾರೆ.

ಚಿದಾನಂದಮೂರ್ತಿಯವರು ಹೊಸರೀತಿಯಲ್ಲಿ ಕನ್ನಡವನ್ನು ಕಟ್ಟುವ ಮೂಲಕ ಕನ್ನಡದ ಅಸ್ಮಿತೆಗಾಗಿ ಹೋರಾಡಿದವರು. ಕನ್ನಡದ ಧೀಮಂತ ಶಕ್ತಿಯಾಗಿ ತಮ್ಮದೇ ರೀತಿಯಲ್ಲಿ ವಿಶೇಷ ಕೊಡುಗೆ ನೀಡಿದ ಚಿಮೂ, ನೆನಪಿನಂಗಳಕ್ಕೆ ಜಾರಿದರೂ ಹಂಪಿಯ ಸ್ಮಾರಕಗಳನ್ನು ಉಳಿಸಲು, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಗಳಿಸಲು ಮಾಡಿದ ಹೋರಾಟಗಳು ಚಿರಸ್ಥಾಯಿಯಾದದ್ದು ಎಂದು ಬಣ್ಣಿಸಿದ್ದಾರೆ.

ಇತಿಹಾಸ ಸಂಶೋಧಕರಾಗಿ ಹಕ್ಕೊತ್ತಾಯದ ಮೂಲಕ ಕನ್ನಡದ ಚಳವಳಿಯನ್ನು ಸಂಪನ್ನಗೊಳಿಸಿದ, ಕನ್ನಡ ಭಾಷಾ ವಿಜ್ಞಾನಿಯಾಗಿದ್ದ ಚಿದಾನಂದಮೂರ್ತಿಯವರು, ನಮ್ಮನ್ನಗಲಿ ಒಂದು ವರ್ಷ ಕಳೆದಿದೆ. ಅವರು ಇನ್ನು ಹತ್ತಾರು ವರ್ಷ ನಮ್ಮೊಂದಿಗೆ ಇರಬೇಕಿತ್ತು. ನಾಡು-ನುಡಿಗೆ ಅವರ ಸೇವೆ ಅನಿವಾರ್ಯವಾಗಿತ್ತು ಎಂದು ತಿಳಿಸಿದ್ದಾರೆ.

ಮೇ 10, 1931 ಚಿದಾನಂದಮೂರ್ತಿಯವರ ಜನ್ಮದಿನ. ಕೊರೊನಾ ಸಂಕಷ್ಟ ಕಾಲ ಇರದೇ ಇದ್ದಿದ್ದರೆ ಇಂದು ನಾಡಿನ ತುಂಬಾ ಅವರ ಕುರಿತಾದ ವಿಚಾರಧಾರೆ ಮಂಥನ ಕಾರ್ಯಕ್ರಮಗಳು ಜರುಗುತ್ತಿದ್ದವು.

ಆದರಿಂದ ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಅನಿವಾರ್ಯತೆ ಒದಗಿ ಬಂದಿರುವುದರಿಂದ, ಎಲ್ಲರೂ ಮನೆಯಲ್ಲಿಯೇ ಇದ್ದು, ಅವರನ್ನು ಸ್ಮರಿಸುವ ಮೂಲಕ ಗೌರವಗಳನ್ನು ಸಮರ್ಪಿಸುವಂತೆ ಮನವಿ ಮಾಡಿದ್ದಾರೆ.

ABOUT THE AUTHOR

...view details