ಬೆಂಗಳೂರು:ಸಾರ್ವಜನಿಕರ ಹಿತದೃಷ್ಟಿಯಿಂದ ಲಾಕ್ಡೌನ್ ಅವಧಿಯನ್ನು ಮುಂದಿನ ಎರಡು ವಾರ (15 ದಿವಸ) ವಿಸ್ತರಿಸಲು ಮುಸ್ಲಿಂ ಬಾಂಧವರ ಪರವಾಗಿ ಮನವಿ ಮಾಡುತ್ತೇನೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪಗೆ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಮನವಿ ಮಾಡಿದ್ದಾರೆ.
ಲಾಕ್ಡೌನ್ ಇನ್ನೂ 15 ದಿನ ಮುಂದುವರೆಸಿ: ಎನ್.ಎ. ಹ್ಯಾರಿಸ್ ಒತ್ತಾಯ - ಎನ್.ಎ. ಹ್ಯಾರಿಸ್
ಸಾರ್ವಜನಿಕರ ಹಿತದೃಷ್ಟಿಯಿಂದ ಲಾಕ್ಡೌನ್ ಅವಧಿಯನ್ನ ಮುಂದಿನ ಎರಡು ವಾರ (15 ದಿವಸ) ವಿಸ್ತರಿಸಬೇಕೆಂದು ಈ ಮೂಲಕ ಮುಸ್ಲಿಂ ಬಾಂಧವರ ಪರವಾಗಿ ತಮ್ಮಲ್ಲಿ ಕೋರುತ್ತೇನೆ ಶಾಸಕ ಎನ್.ಎ. ಹ್ಯಾರಿಸ್ ತಿಳಿಸಿದ್ದಾರೆ.
ಈ ಸಂಬಂಧ ಸಿಎಂಗೆ ಪತ್ರ ಬರೆದಿರುವ ಅವರು, ಪ್ರತ್ಯೇಕ ವಿಡಿಯೊ ಸಂದೇಶ ಕೂಡ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ನಾನು ನಿಮಗೆ ಮನವಿ ಪತ್ರವನ್ನು ಬರೆದಿದ್ದು, ಕರ್ನಾಟಕ ಸರ್ಕಾರ ಮತ್ತು ರಾಜ್ಯ ವಕ್ಫ್ ಮಂಡಳಿ ನಿರ್ದೇಶನದಂತೆ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಮಾಸದಲ್ಲಿ ಪ್ರತಿ ದಿನದ ನಮಾಜನ್ನು ಮನೆಯಲ್ಲೇ ನಿರ್ವಾಹಿಸುತ್ತಿದ್ದು, ರಾಜ್ಯದ ಮುಸ್ಲಿಮರು ಸರ್ಕಾರದ ಈ ನಿರ್ಧಾರಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೇ ರಂಜಾನ್ ಹಬ್ಬದ ವಿಶೇಷ ಪ್ರಾರ್ಥನೆಯನ್ನು ಸಹ ಮನೆಯಲ್ಲಿ ನಿರ್ವಹಿಸುವುದಾಗಿ ಮುಸ್ಲಿಂ ಬಾಂಧವರು ಸಾಮಾಜಿಕ ಜಾಲತಾಣದ ಮುಖಾಂತರ ನನಗೆ ತಿಳಿಸುತ್ತಿದ್ದಾರೆ. ಆದುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಲಾಕ್ಡೌನ್ ಅವಧಿಯನ್ನು ಮುಂದಿನ ಎರಡು ವಾರ (15 ದಿವಸ) ವಿಸ್ತರಿಸಬೇಕೆಂದು ಈ ಮೂಲಕ ಮುಸ್ಲಿಂ ಬಾಂಧವರ ಪರವಾಗಿ ತಮ್ಮಲ್ಲಿ ಕೋರುತ್ತೇನೆ ಎಂದಿದ್ದಾರೆ.