ಮೈಸೂರು: ಸಾಂಕ್ಕೃತಿಕ ನಗರಿಯಲ್ಲಿ ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಆರಂಭವಾಗಿದೆ. ಈ ಬಾರಿ ಸರಳವಾಗಿ ದಸರಾ ಆಚರಿಸಲು ನಿರ್ಧರಿಸಲಾಗಿದ್ದು, ಇನ್ನು ನಗರದಲ್ಲಿ ದೀಪಾಲಂಕಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.
ಸಾಂಸ್ಕೃತಿಕ ನಗರಿಯಲ್ಲಿ ದಸರಾ ದೀಪಾಲಂಕಾರ.. ಕೊರೊನಾ ಭೀತಿಯಲ್ಲೂ ವಿಜೃಂಭಣೆ - Mysore Palace Lighting
ದಸರಾ ಉದ್ಘಾಟನೆಗೆ ದಿನಗಣನೆ ಆರಂಭವಾಗುತ್ತಿರುವುದರಿಂದ, ಮೈಸೂರು ನಗರದ ಸುತ್ತ ದೀಪಾಲಂಕಾರಕ್ಕೆ ಚೆಸ್ಕಾಂ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದಾರೆ. ಆದರೆ ಇನ್ನೊಂದೆಡೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದ್ದು, ದೀಪಾಲಂಕಾರ ವೀಕ್ಷಿಸಲು ಬರುವವರ ಸಂಖ್ಯೆ ಹೆಚ್ಚಾದರೆ ಕೊರೊನಾ ಭೀತಿ ಎದುರಾಗಲಿದೆ.
ಸಾಂಸ್ಕೃತಿಕಾ ನಗರಿಯಲ್ಲಿ ದಸರಾ ದೀಪಾಲಂಕಾರ.
ದಸರಾ ಉದ್ಘಾಟನೆಗೆ ದಿನಗಣನೆ ಆರಂಭವಾಗುತ್ತಿರುವುದರಿಂದ, ಮೈಸೂರು ನಗರದ ಸುತ್ತ ದೀಪಾಲಂಕಾರಕ್ಕೆ ಚೆಸ್ಕಾಂ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದಾರೆ. ಆದರೆ ಇನ್ನೊಂದೆಡೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದ್ದು, ದೀಪಾಲಂಕಾರ ವೀಕ್ಷಿಸಲು ಬರುವವರ ಸಂಖ್ಯೆ ಹೆಚ್ಚಾದರೆ ಕೊರೊನಾ ಭೀತಿ ಎದುರಾಗಲಿದೆ.
ಈ ಹಿನ್ನೆಲೆ ಜಿಲ್ಲಾಡಳಿತ ಜನಸಂದಣಿಯಾಗದಂತೆ ಕ್ರಮ ವಹಿಸಬೇಕಿದ್ದು, ಕೊರೊನಾ ತಡೆಗೆ ಮುಂದಾಗಬೇಕಿದೆ ಎಂಬ ಮಾತುಗಳು ಸಾರ್ವಜನಿರಿಂದ ಕೇಳಿಬರುತ್ತಿವೆ.