ಬೆಂಗಳೂರು:ಮೈಸೂರು ರಸ್ತೆಯ ಬಾಪುಜಿನಗರದಲ್ಲಿ ನಡೆದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಷ್ಟಕ್ಕೊಳಗಾದ ಮನೆ ಮಾಲೀಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕೆಮಿಕಲ್ ಫ್ಯಾಕ್ಟರಿ ಅಗ್ನಿ ಅವಘಡ .. ಲಕ್ಷಾಂತರ ರೂ. ಮೌಲ್ಯದ ಪೀಠೋಪಕರಣ ಬೂದಿ.. ಮನೆ ಮಾಲೀಕ ಕಣ್ಣೀರು!! - ಮೈಸೂರು ರಸ್ತೆ ಕೆಮಿಕಲ್ ಫ್ಯಾಕ್ಟರಿ ಅಗ್ನಿ ದುರಂತ
ನಾಳೆ ನನ್ನ ಮಗಳ ಮದುವೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ದಿಕ್ಕು ತೋಚುತ್ತಿಲ್ಲ. ₹18 ಲಕ್ಷ ಲೋನ್ ಕಟ್ಟಬೇಕಿದೆ, ಈ ಹಂತದಲ್ಲಿ ದುರಂತ ಸಂಭವಿಸಿರುವುದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ..
ಬಾಪುಜಿನಗರದಲ್ಲಿ ವಾಸವಿರುವ ಫರ್ನೀಚರ್ ತಯಾರಿಕಾ ಕಾರ್ಖಾನೆ ಮಾಲೀಕರಾಗಿರುವ ಮಣಿ ಎಂಬುವರು ಮಾತನಾಡಿ, 2003ರಿಂದಲೂ ಇಲ್ಲಿ ವಾಸವಿದ್ದೇನೆ. ಮೂರು ಮನೆಗಳನ್ನು ಭೋಗ್ಯಕ್ಕೆ ನೀಡಿದ್ದು, ಮೊದಲ ಅಂತಸ್ತಿನಲ್ಲಿ ಫರ್ನೀಚರ್ ಕಾರ್ಖಾನೆಯಿದೆ. ಇಂದು ಬೆಳಗ್ಗೆ ಸುಮಾರು 10.30ಕ್ಕೆ ಬೆಂಕಿ ಅವಘಡದ ಬಗ್ಗೆ ಮಾಹಿತಿ ಬಂತು. ಕೂಡಲೇ ಮನೆಗೆ ಬಂದು ನೋಡಿದಾಗ, ಮೂರನೇ ಮಹಡಿಯಲ್ಲಿ ಶೇಖರಿಸಿದ್ದ 300 ಚೇರ್ಗಳು ಸೇರಿದಂತೆ ಪೀಠೋಪಕರಣಗಳೆಲ್ಲವೂ ಹಾನಿಯಾಗಿದ್ದವು ಎಂದರು.
ಘಟನೆಯಿಂದ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಮನೆಯಲ್ಲಿ ಇದ್ದವರನ್ನೆಲ್ಲ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಾಂತರಿಸಿದ್ದಾರೆ. ನಾಳೆ ನನ್ನ ಮಗಳ ಮದುವೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ದಿಕ್ಕು ತೋಚುತ್ತಿಲ್ಲ. ₹18 ಲಕ್ಷ ಲೋನ್ ಕಟ್ಟಬೇಕಿದೆ, ಈ ಹಂತದಲ್ಲಿ ದುರಂತ ಸಂಭವಿಸಿರುವುದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.