ಕರ್ನಾಟಕ

karnataka

ETV Bharat / state

ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜೊತೆ ಸಿದ್ದರಾಮಯ್ಯ ಚರ್ಚೆ - Siddaramayya latest news

ಇಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ವಿಜಯ್ ಅವರ ಜೊತೆ ಕೆಪಿಸಿಸಿಯ ಆರೋಗ್ಯ ಹಸ್ತ ಕಾರ್ಯಕ್ರಮದ ಕುರಿತು ಚರ್ಚೆ ನಡೆಸಿದರು.

ಸಿದ್ದರಾಮಯ್ಯ ಚರ್ಚೆ
ಸಿದ್ದರಾಮಯ್ಯ ಚರ್ಚೆ

By

Published : Sep 6, 2020, 6:45 PM IST

ಬೆಂಗಳೂರು:ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ವಿಜಯ್ ಅವರು ಇಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿಯಾಗಿ ಚರ್ಚಿಸಿದರು.

ಈ ವೇಳೆ ಜಿಲ್ಲೆಯಲ್ಲಿ ಕಾರ್ಯಾರಂಭಗೊಂಡಿರುವ ಕೆಪಿಸಿಸಿಯ ಆರೋಗ್ಯ ಹಸ್ತ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಅವರು ಜೊತೆಗಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿರುವ ಕಾರಣ, ಪಕ್ಷದ ಕಚೇರಿ ಬೆಳವಣಿಗೆಯನ್ನು ಸಲೀಂ ಅಹಮದ್ ಅವರು ಸಿದ್ದರಾಮಯ್ಯಗೆ ವಿವರಿಸಿದರು.

ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಲ್ಲಿ ಒಂದಾದ ಆರೋಗ್ಯ ಹಸ್ತ ಯಶಸ್ಸಿಗೆ ನಿರಂತರ ಶ್ರಮ ತೊಡಗಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯರ ತವರು ಜಿಲ್ಲೆಯಾಗಿರುವ ಮೈಸೂರಿನಲ್ಲಿ ಆರೋಗ್ಯ ಹಸ್ತ ಯಶಸ್ಸಿಗೆ ವಿಶೇಷ ಗಮನ ಹರಿಸಬೇಕಿದ್ದು, ಈ ಸಂಬಂಧ ಮಾರ್ಗದರ್ಶನ ನೀಡುವ ಕಾರ್ಯವನ್ನು ಮಾಡಲಾಯಿತು.

ಅತ್ಯಂತ ಪ್ರತಿಷ್ಠೆಯಾಗಿ ರಾಜ್ಯ ಕಾಂಗ್ರೆಸ್ ಆರೋಗ್ಯ ಹಸ್ತವನ್ನು ಪರಿಗಣಿಸಿದೆ. ಇದರಿಂದ ರಾಜ್ಯದಲ್ಲಿ ಇದರ ಯಶಸ್ಸು ಅನಿವಾರ್ಯ. ಈಗಾಗಲೇ ಬಹುತೇಕ ಜಿಲ್ಲೆಯ ನಾಯಕರು ತಮ್ಮ ಪಾಲಿನ ಕಿಟ್ ಕೊಂಡೊಯ್ದು ಕಾರ್ಯ ಪ್ರವೃತ್ತರಾಗಿದ್ದಾರೆ. ಮೈಸೂರಿನಲ್ಲಿ ಇದರ ಕಾರ್ಯ ನಿರ್ವಹಣೆ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಲು ಇಂದು ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ವಿಜಯ್ ರನ್ನು ಜೊತೆ ಸಮಾಲೋಚಿಸಿದರು. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಸರ್ಕಾರ ನಂಬಿ ಕೂರುವ ಬದಲು, ಪಕ್ಷವೇ ಆರೋಗ್ಯ ಹಸ್ತ ಮೂಲಕ ಪರಿಶ್ರಮ ತೊಡಗಿಸಬೇಕೆಂದು ಸೂಚನೆ ನೀಡಿ ಕಳುಹಿಸಿದರು.

ಪಕ್ಷದ ಬೆಳವಣಿಗೆಗಳು, ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಹೋರಾಟ, ನಿಲುವು, ಡಿಕೆಶಿ ಆರೋಗ್ಯಸ್ಥಿತಿ, ಪಕ್ಷದ ಕಟ್ಟಡ ನವೀಕರಣ ಕಾರ್ಯದ ಪ್ರಗತಿ ಸೇರಿದಂತೆ ಹಲವು ವಿಚಾರಗಳ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಜೊತೆ ಸಿದ್ದರಾಮಯ್ಯ ಚರ್ಚಿಸಿದರು.

ABOUT THE AUTHOR

...view details