ಕರ್ನಾಟಕ

karnataka

ETV Bharat / state

ಮೈಸೂರು: ಕೊರೊನಾ ಸೋಂಕಿತರ ವರದಿ ಇನ್ನೆರಡು ದಿನಗಳಲ್ಲಿ ಲಭ್ಯ - Mysore Coronavirus Report available in two days

ಮೈಸೂರಿನಲ್ಲಿ ವಿವಿಧ ಮೂಲಗಳಿಂದ ಒಟ್ಟು ಎಷ್ಟು ಜನರಿಗೆ ಕೊರೊನಾ ಸೋಂಕು ಹರಡಿದೆ ಎಂಬವುದರ ಬಗ್ಗೆ ಸಂಪೂರ್ಣ ವರದಿ ಇನ್ನೆರಡು ದಿನಗಳಲ್ಲಿ ಲಭ್ಯವಾಗಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Mysore Coronavirus Report available in two days
ಮೈಸೂರು ಕೊರೊನಾ ಸೋಂಕಿತರ ವರದಿ ಇನ್ನೆರಡು ದಿನಗಳಲ್ಲಿ ಲಭ್ಯ

By

Published : Apr 7, 2020, 9:02 AM IST

ಬೆಂಗಳೂರು: ಮೈಸೂರಿನಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಇನ್ನೆರಡು ದಿನದಲ್ಲಿ ಲಭ್ಯವಾಗಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಜಿಲ್ಲೆಯಿಂದ ದೆಹಲಿಯ ತಬ್ಲಿಘಿ ಜಮಾಅತ್​ ಕಾರ್ಯಕ್ರಮಕ್ಕೆ ಹೋದವರ ಬಗ್ಗೆ ಮಾಹಿತಿ ಕಲೆಹಾಕಿ ಅಂತಿಮ ವರದಿ ಸಿದ್ದಪಡಿಸಿಸಲಾಗುತ್ತಿದೆ. ಇದರ ಜೊತೆಗೆ ಕೊರೊನಾ ಹರಡುವಿಕೆಯ ಕೇಂದ್ರವಾಗಿರುವ ಮೈಸೂರು ಫ್ಯಾಕ್ಟರಿ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ಈ ಎರಡು ಸ್ಥಳಗಳಿಂದ ಒಟ್ಟು ಎಷ್ಟು ಜನರಿಗೆ ಕೊರೊನಾ ಹರಡಿದೆ ಎಂಬ ಸಂಪೂರ್ಣ ವರದಿ ಕೈ ಸೇರಲಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಆರಂಭದಲ್ಲಿ ಜಿಲ್ಲೆಯಲ್ಲಿ ಎರಡು ಕೊರೊನಾ ಪ್ರಕರಣಗಳು ಪತ್ತೆಯಾಗಿತ್ತು. ಬಳಿಕ ದೆಹಲಿ ಕಾರ್ಯಕ್ರಮಕ್ಕೆ ತೆರಳಿದವರು ಮತ್ತು ಮೈಸೂರು ಫ್ಯಾಕ್ಟರಿ ಮೂಲಗಳಿಂದ ಸೋಂಕು ಹರಡಲು ಶುರುವಾಗಿದೆ. ಪ್ರವಾಸಿಗಳಿಂದ ಮತ್ತು ಫ್ಯಾಕ್ಟರಿಗೆ ಭೇಟಿ ನೀಡುವ ವಿದೇಶಿ ಪ್ರತಿನಿಧಿಗಳಿಂದ ಕೊರೊನಾ ಹರಡಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

For All Latest Updates

TAGGED:

ABOUT THE AUTHOR

...view details