ಬೆಂಗಳೂರು :ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಬೆರಳೆಣಿಕೆಯಷ್ಟೇ ರೈಲು ಸೇವೆ ಒದಗಿಸಲಾಗಿತ್ತು. ಇದೀಗ ಕೋವಿಡ್ ತೀವ್ರತೆ ಕಡಿಮೆ ಆಗುತ್ತಿದೆ. ಜನಸಂದಣಿ ಹೆಚ್ಚಾಗುತ್ತಿರುವ ಹಿನ್ನೆಲೆ ಬೇರೆ ಬೇರೆ ಜಿಲ್ಲೆಗಳಿಗೆ ಹಾಗೂ ರಾಜ್ಯಕ್ಕೆ ರೈಲು ಸೇವೆ ಒದಗಿಸಲಾಗುತ್ತಿದೆ.
ಅಂದ ಹಾಗೇ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿನ ಜನರ ಸೌಕರ್ಯಕ್ಕಾಗಿ ಇದ್ದ ಪ್ಯಾಸೆಂಜರ್ ರೈಲು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇದೀಗ ಈ ಎರಡು ನಗರಗಳ ನಡುವೆ ಪ್ಯಾಸೆಂಜರ್ ರೈಲು ಸೇವೆ ಸೆಪ್ಟೆಂಬರ್ 1ರಿಂದ ಪ್ರಾರಂಭವಾಗುತ್ತಿದೆ. ಇದರಿಂದ ನಿತ್ಯ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.