ಬೆಂಗಳೂರು :2016ರ ಮೈಸೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳು ತಪ್ಪಿತಸ್ಥರೆಂದು ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ನ್ಯಾ. ಕಸನಪ್ಪ ನಾಯ್ಕ್ ಅವರಿಂದ್ದ ಪೀಠ ಈ ತೀರ್ಪು ನೀಡಿದೆ. ತಮಿಳುನಾಡು ಮೂಲದ A1 ಅಬ್ಬಾಸ್ ಅಲಿ, A ಸಂಸುನ್ ಕರೀ ರಾಜಾ, A5 ದಾವೂದ್ ಸುಲೇಮಾನ್ ತಪ್ಪಿತಸ್ಥರು. ಆರೋಪಿಗಳು 'ಬೇಸ್ ಮೂವ್ಮೆಂಟ್' ಎಂಬ ಸಂಘಟನೆ ಕಟ್ಟಿಕೊಂಡು ಅಲ್- ಕೈದಾ ಸಂಘಟನೆಗೆ ಬೆಂಬಲ ನೀಡುತ್ತಿದ್ದರು ಎಂದು ವಿಚಾರಣೆ ವೇಳೆ ಸಾಬೀತಾಗಿದೆ.