ಬೆಂಗಳೂರು: ನನ್ನ ಮಗ ನಿರಪರಾಧಿ, ನ್ಯಾಯಾಲಯಕ್ಕೆ ವಕೀಲ ಅಝ್ಮದ್ ಪಾಷಾ ಮೂಲಕ ಅರ್ಜಿ ಸಲ್ಲಿಸಿದ್ದೇವೆ. ನಾವು ಗೆದ್ದೇ ಗೆಲ್ತೀವಿ ಎಂದು ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧಿತನಾಗಿರುವ ದೆಹಲಿ ಮೂಲದ ವಿರೇನ್ ಖನ್ನಾ ಅವರ ತಂದೆ ಶ್ರೀರಾಮ್ ಖನ್ನಾ ತಿಳಿಸಿದ್ದಾರೆ.
ನನ್ನ ಮಗ ನಿರಪರಾಧಿ, ಕೋರ್ಟ್ನಲ್ಲಿ ನಾವು ಗೆದ್ದೇ ಗೆಲ್ತೀವಿ: 'ಖನ್ನಾ' ತಂದೆಯ ವಿಶ್ವಾಸ - CCB Police
ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾದ ಪ್ರಕರಣದಲ್ಲಿ ಬಂಧಿತನಾಗಿರುವ ದೆಹಲಿ ಮೂಲದ ವಿರೇನ್ ಖನ್ನಾ ಸದ್ಯ ಸಿಸಿಬಿ ಪೊಲೀಸರ ವಶದಲ್ಲಿದ್ದು, ಹೀಗಾಗಿ ಸಿಸಿಬಿ ಕಚೇರಿಗೆ ಆಗಮಿಸಿದ್ದ ಖನ್ನಾ ಪೋಷಕರು ತಮ್ಮ ಮಗನ ಆರೋಗ್ಯದ ಬಗ್ಗೆ ವಿಚಾರಿಸಿ ಹೊರಬಂದ ಬಳಿಕ ಮಾತನಾಡಿ, ಪ್ರಕರಣದಲ್ಲಿ ಗೆದ್ದು ಬರುವ ವಿಶ್ವಾಸ ವ್ಯಕ್ತಪಡಿಸಿದರು.
ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ಬಂಧಿತನಾಗಿರುವ ದೆಹಲಿ ಮೂಲದ ವಿರೇನ್ ಖನ್ನಾ ಸದ್ಯ ಸಿಸಿಬಿ ಪೊಲೀಸರ ವಶದಲ್ಲಿದ್ದು, ಹೀಗಾಗಿ ಸಿಸಿಬಿ ಕಚೇರಿಗೆ ಆಗಮಿಸಿದ್ದ ಆತನ ಪೋಷಕರು ತಮ್ಮ ಮಗನ ಆರೋಗ್ಯದ ಬಗ್ಗೆ ವಿಚಾರಿಸಿದರು.
ವಿರೇನ್ ಖನ್ನಾ ಡ್ರಗ್ಸ್ ದಂಧೆಯ ಕಿಂಗ್ ಪಿನ್ ಆಗಿದ್ದು, ನಟಿ ರಾಗಿಣಿ ದ್ವಿವೇದಿಗೆ ಆತ್ಮೀಯ ಎನ್ನಲಾಗ್ತಿದೆ. ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಡ್ರಗ್ಸ್ ಪೂರೈಸುತ್ತಿದ್ದ ಹಾಗೂ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಖನ್ನಾ ಬಹುತೇಕ ಭಾಗಿಯಾಗಿದ್ದಕ್ಕೆ ಸಿಸಿಬಿ ಪೊಲೀಸರ ಬಳಿ ಮಹತ್ತರ ಸಾಕ್ಷಿಗಳಿವೆ. ಹಾಗೆಯೇ ಖನ್ನಾ ವಾಸವಿದ್ದ ಅಪಾರ್ಟ್ಮೆಂಟ್ನಲ್ಲಿ ಡ್ರಗ್ಸ್ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದರು. ಸದ್ಯ ಸಿಸಿಬಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.