ಕರ್ನಾಟಕ

karnataka

ETV Bharat / state

ಮಟನ್​ ಅಂಗಡಿ ಮಾಲೀಕನ ಐಷಾರಾಮಿ ಜೀವನ...ಗಲಭೆಗೂ ಬಳಕೆಯಾಗಿತ್ತಾ ಫಂಡಿಂಗ್​​..? - Habeas corpus

ಬಂಧಿತ ಸಮೀಯುದ್ದೀನ್ ಮೂಲತಃ ಮಡಿಕೇರಿಯವನು. ಈತ ಬೆಂಗಳೂರಿಗೆ ಬಂದು ಶಿವಾಜಿನಗರ ಆಸು - ಪಾಸಿನಲ್ಲಿ ಮಟನ್ ಅಂಗಡಿ ನಡೆಸಿ ಜೀವನ ನಡೆಸುತ್ತಿದ್ದ. ಮಟನ್ ಮಾರಿ ಜೀವನ ಮಾಡ್ತಿದ್ರೆ ಸರಿಯಾದ ಜೀವನ ಸಾಗಿಸ್ತಿದ್ನೆನೋ ಆದರೆ, ಈತ ಮೊದಲು ಪಿಎಫ್​​​​ಐ ಎಂಬ ಸಂಘಟನೆಯನ್ನು ಸೇರಿದ್ದ, ಪಿಎಫ್​​​ಐ ಬ್ಯಾನ್ ಬಳಿಕ ಎಎಸ್​​​​​​​​​​​​ಡಿಪಿಐ ಸಂಘಟನೆ ಸೇರಿಕೊಂಡು ಕಳೆದ 10 ವರ್ಷದಿಂದ ಹಲವಾರು ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ‌.

The luxurious life of a mutton shop owner
ಮಟನ್​ ಅಂಗಡಿ ಮಾಲಿಕನ ಐಷಾರಾಮಿ ಜೀವನ...ಗಲಭೆಗೂ ಬಳಕೆಯಾಗಿತ್ತಾ ಫಡಿಂಗ್​​..?

By

Published : Aug 22, 2020, 10:41 AM IST

ಬೆಂಗಳೂರು:ಡಿ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಭಯೋತ್ಪಾದಕರ ಜೊತೆ ನಂಟು ಹೊಂದಿದ ಪ್ರಮುಖ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಆದರೆ, ಈತನ ಪತ್ನಿ ಫಾತೀಮಾ ತಬಸೂಮ್ ಕೋರ್ಟ್​​​ಗೆ ಮೊರೆ ಹೋಗಿ ಹೆಬಿಯಸ್ ಕಾರ್ಪಸ್ ಅರ್ಜಿ ಹಾಕಿ ತನ್ನ ಗಂಡ ಕಾಣೆಯಾಗಿದ್ದಾರೆಂದು ತಿಳಿಸಿದ್ದಾರೆ. ನನ್ನ ಪತಿ ಅಮಾಯಕ, ಪೊಲೀಸರು ಕಾರಣವಿಲ್ಲದೇ ಬಂಧಿಸಿದ್ದಾರೆ ಎಂದು ನ್ಯಾಯಾಲಯದಲ್ಲಿ ಬಂಧನ ಕುರಿತು ಪ್ರಶ್ನಿಸಿಲು ಮುಂದಾಗಿದ್ದಾರೆ.

ಆದರೆ, ಪೊಲೀಸರು ದಂಪತಿಗೆ ಮರು ಉತ್ತರ ನೀಡಲು ಸಮೀಯುದ್ದೀನ್ ಕುರಿತ ಸಂಪೂರ್ಣ ದಾಖಲೆಯನ್ನು ಕಲೆಹಾಕುತ್ತಿದ್ದಾರೆ. ಆತ ಯಾರು, ಆತನ ಹಿನ್ನೆಲೆ ಏನು.? ಆತ ಹೇಗಿದ್ದ..? ಎಲ್ಲಿಂದ ಎಲ್ಲಿಗೆ ಹೋಗಿ ಯಾರ ಬಳಿ ಸಂಪರ್ಕ ಹೊಂದಿದ್ದ ಎಂಬೆಲ್ಲಾ ಮಾಹಿತಿಯನ್ನು ಕಲೆ ಹಾಕವಲ್ಲಿ ನಿರತರಾಗಿದ್ದಾರೆ.

ಪೊಲೀಸರು ಮಾಡಿರುವ ಮಾಸ್ಟರ್ ಫ್ಲಾನ್​​ನಲ್ಲಿ ಏನಿದೆ..?

ಬಂಧಿತ ಸಮೀಯುದ್ದೀನ್ ಮೂಲತಃ ಮಡಿಕೇರಿಯವನು. ಈತ ಬೆಂಗಳೂರಿಗೆ ಬಂದು ಶಿವಾಜಿನಗರ ಆಸು-ಪಾಸಿನಲ್ಲಿ ಮಟನ್ ಅಂಗಡಿ ನಡೆಸಿ ಜೀವನ ನಡೆಸುತ್ತಿದ್ದ. ಮಟನ್ ಮಾರಿ ಜೀವನ ಮಾಡ್ತಿದ್ರೆ ಸರಿಯಾದ ಜೀವನ ಸಾಗಿಸ್ತಿದ್ನೆನೋ ಆದರೆ, ಈತ ಮೊದಲು ಪಿಎಫ್​​​​ಐ ಎಂಬ ಸಂಘಟನೆಯನ್ನು ಸೇರಿದ್ದ. ತದ ನಂತರ ಪಿಎಫ್​​​ಐ ಬ್ಯಾನ್ ಬಳಿಕ ಎಎಸ್​​​​​​​​​​​​ಡಿಪಿಐ ಸಂಘಟನೆ ಸೇರಿಕೊಂಡು ಕಳೆದ 10 ವರ್ಷದಿಂದ ಹಲವಾರು ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ‌.

ಹೆಸರಿಗೆ ಮಟನ್ ಅಂಗಡಿ‌ ನಡೆಸುವವನ ಬಳಿ ಐಷಾರಾಮಿ ಕಾರು, ಹೈಫೈ ಮೊಬೈಲ್ ಮನೆ ಹಾಗೆ ಪತ್ನಿ ಹೆಸರಲ್ಲಿ ನಾರಿ ಎಂಬ ಸಂಘಟನೆ ಇದೆಲ್ಲ ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಸಿಸಿಬಿಗೆ ಕಾಡಲಾರಂಭಿಸಿದೆ. ಈ ಕುರಿತು ತನಿಖೆ ಕೈಗೊಂಡಾಗ ಈತನಿಗೆ ಹಲವು ಕಡೆಗಳಿಂದ ಲಕ್ಷ ಲಕ್ಷ ಫಂಡಿಂಗ್ ಬಂದಿರುವುದು ಪತ್ತೆಯಾಗಿದೆ.

ಅಲ್ಲದೇ ಈತನ ಪತ್ನಿ ನಡೆಸುತ್ತಿದ್ದ ನಾರಿ ಫೌಂಡೇಶನ್​​ಗೆ​ ವಿದೇಶದಿಂದ ಹಣ ಬರ್ತಿತ್ತು. ಈ ಹಣವನ್ನು ಪೌರತ್ವ ಕಾಯ್ದೆ ಕಿಚ್ಚು ಹಚ್ಚಲು, ಗಲಭೆ ಸೃಷ್ಟಿಸಲು, ಪ್ರತಿಭಟನೆ ನಡೆಸಲು ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

ಸದ್ಯ ಬಂಧಿತ ಸಮೀಯುದ್ದೀನ್ ಪತ್ನಿ ಹೈಕೋರ್ಟ್​ನಲ್ಲಿ​​ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವ ಕಾರಣ ಸಿಸಿಬಿ ಡಿಸಿಪಿ ನ್ಯಾಯಾಲಯದಲ್ಲಿ ವಾದ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ. ಆರೋಪಿಗೆ ಗಲಭೆ ನಡೆದ ಮರುದಿನವೇ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಆರೋಪಿ ವಿಚಾರಣೆಗೆ ಬಾರದೇ ಮನೆಗೆ ಬೀಗ ಹಾಕಿ ತಲೆಮರೆಸಿಕೊಂಡಿದ್ದಾನೆ.

ಹಾಗೆ ಪತ್ನಿ ಹೆಸರಲ್ಲಿ ನಡೆಯುತ್ತಿರುವ ನಾರಿ ಸಂಘಟನೆಗೆ ಲಕ್ಷ ಲಕ್ಷ ಹಣ ಬರುತ್ತಿದ್ದು, ಇದಕ್ಕೆ ಉತ್ತರ ನೀಡುವಂತೆ ಪತ್ನಿಗೆ ತಿಳಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

ಆರೋಪಿ 2016ರಲ್ಲಿ ನಡೆದ ರುದ್ರೇಶ್ ಕೊಲೆ ಪ್ರಕರಣ ಹಾಗೂ ರುದ್ರೇಶ್ ಕೊಲೆ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಪದೇ ಪದೆ ಭೇಟಿ, ನಗರದಲ್ಲಿ ‌ಉಗ್ರ ಸಂಪರ್ಕ ಜೊತೆ ನಂಟು ಈ ಎಲ್ಲ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಿಸಿಬಿ ಹಾಜರು ಪಡಿಸಲಿದ್ದಾರೆ.

ABOUT THE AUTHOR

...view details