ಬೆಂಗಳೂರು: ಮುತ್ತೂಟ್ ಫೈನಾನ್ಸ್ನಲ್ಲಿ ಥೇಟ್ ಸಿನಿಮಾ ಸ್ಟೈಲ್ನಲ್ಲಿ ಚಿನ್ನಾಭರಣ ಕದ್ದಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಡಿಸಿಪಿ ಶರಣಪ್ಪ ಮತ್ತು ಡಿಸಿಪಿ ಕುಲ್ ದೀಪ್ ಜೈನ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನೀಕೆಗೆ ಇಳಿದಾಗ 77 ಕೆಜಿ ಚಿನ್ನ ಕಳ್ಳತನದ ಹಿಂದೆ ಒಂದು ಪ್ರೋಗ್ರಾಂ ಇರುವ ವಿಚಾರ ಬೆಳಕಿಗೆ ಬಂದಿದೆ.
ಮುತ್ತೂಟ್ ಫೈನಾನ್ಸ್ನಲ್ಲಿ ದರೋಡೆ... ಇದರ ಹಿಂದಿತ್ತಂತೆ ಭರ್ಜರಿ ಪ್ಲಾನ್! ಮುತ್ತೂಟ್ ಫೈನಾನ್ಸ್ ರಾಬರಿಗೂ ಕ್ರಿಸ್ಮಸ್ ಕಾರ್ಯಕ್ರಮಕ್ಕು ಲಿಂಕ್ ಏನ್ ಗೊತ್ತಾ?
ಮುತ್ತೂಟ್ ಫೈನಾನ್ಸ್ ಏರಿಯಾದಲ್ಲಿ ಕ್ರೈಸ್ತರ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಜೋರಾಗಿ ಆರ್ಕೆಸ್ಟ್ರಾ, ಮೈಕ್ ಸೆಟ್ ಹಾಕಲಾಗಿತ್ತು. ಇದರಿಂದ ಕಾರ್ಯಕ್ರಮದ ದಿನವೇ ರಾಬರಿಗೆ ಸ್ಕೆಚ್ ಹಾಕಿದ್ದ ದುಷ್ಕರ್ಮಿಗಳು, ಕಾರ್ಯಕ್ರಮದಲ್ಲಿ ಆರ್ಕೆಸ್ಟ್ರಾ ಇರುತ್ತೆ. ಜೋರಾಗಿ ಹಾಡುಗಳನ್ನ ಹಾಡ್ತಿರ್ತಾರೆ. ಈ ವೇಳೆ ರಾಬರಿ ಮಾಡಿದ್ರೆ ಬಚಾವ್ ಆಗಬಹುದು ಅಂತ ಸ್ಕೆಚ್ ಮಾಡಿ ಗ್ಯಾಸ್ ಕಟರ್ ಹಿಡಿದು ಸೋಮವಾರ ರಾತ್ರಿ ಅಂಗಡಿಯ ಹಿಂಭಾಗದ ಬಾತ್ ರೂಂ ಗೋಡೆ ಕೊರೆದು ಚಿನ್ನಾಭರಣ ಜೊತೆ ಎಸ್ಕೇಪ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಸಿಲಿಕಾನ್ ಸಿಟಿಯಲ್ಲಿ ಕಂಡು ಕೇಳರಿಯದ ದರೋಡೆ: 77 ಕೆಜಿ ಚಿನ್ನಾಭರಣ ದೋಚಿದ ಕಳ್ಳರು
ಕಳ್ಳತನಕ್ಕು ಮೊದಲೇ ನಡೆದಿತ್ತು ಬಿಗ್ ಪ್ಲಾನ್!
ಮುತ್ತೂಟ್ ಫೈನಾನ್ಸ್ ಸುತ್ತಲಿನ ಅಂಗಡಿ ಸಿಸಿಟಿವಿಗಳನ್ನ ಗಮನಿಸಿದ್ದ ಕಳ್ಳರು ಪಕ್ಕಾ ಪ್ಲಾನ್ ಮಾಡಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡ ಫುಲ್ ಅಲರ್ಟ್ ಆಗಿ ಲೋಕೇಷನ್ ಟವರ್ ಡಂಪ್ ಪಡೆದು ಪರಿಶೀಲನೆ ನಡೆಸುತ್ತಿದೆ.