ಬೆಂಗಳೂರು: ಮಣಿಪಾಲ್ ಆಸ್ಪತ್ರೆಯಿಂದ ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಅವರ ಪಾರ್ಥಿವ ಶರೀರವನ್ನು, ತೆರೆದ ಆ್ಯಂಬುಲೆನ್ಸ್ನಲ್ಲಿ ರಸ್ತೆ ಮೂಲಕ ಬಿಡದಿಗೆ ತೆಗೆದುಕೊಂಡು ಹೋಗಲಾಗಿದೆ. ರಸ್ತೆಯಲ್ಲಿ ಯಾವುದೇ ಜನಸಂದಣಿ ಆಗದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಪೊಲೀಸ್ ಬೆಂಗಾವಲು ಪಡೆಯೊಂದಿಗೆ ಆ್ಯಂಬುಲೆನ್ಸ್ ತೆರಳಿತು.
ಮಣಿಪಾಲ್ ಆಸ್ಪತ್ರೆಯಿಂದ ಬಿಡದಿಗೆ ಮುತ್ತಪ್ಪ ರೈ ಪಾರ್ಥಿವ ಶರೀರ ರವಾನೆ - ಪೂರ್ವ ವಿಭಾಗ ಡಿಸಿಪಿ ಶರಣಪ್ಪ
ಮುತ್ತಪ್ಪ ರೈ ಅವರ ಪಾರ್ಥಿವ ಶರೀರವನ್ನು ಮಣಿಪಾಲ್ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ನಲ್ಲಿ ಬಿಡದಿಗೆ ಕೊಂಡೊಯ್ಯಲಾಗಿದೆ. ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಇದರ ಜವಾಬ್ದಾರಿ ಹೊತ್ತಿದ್ದು, ಪೊಲೀಸರು ಸಂಪೂರ್ಣ ಅಲರ್ಟ್ ಆಗಿದ್ದಾರೆ.
ಗುಲಾಬಿ ಹಾಗೂ ಮಲ್ಲಿಗೆ ಹೂವುಗಳಿಂದ ವಾಹನಕ್ಕೆ ಅಲಂಕಾರ ಮಾಡಲಾಗಿದ್ದು, ಮುತ್ತಪ್ಪ ರೈ ಹೆಸರಲ್ಲಿ ಘೋಷಣೆ ಕೂಗುತ್ತ ಯುವಕರು ತೆರಳಿದರು. ಇನ್ನು ಆಸ್ಪತ್ರೆಯಲ್ಲಿ ಕಾದು ನಿಂತಿದ್ದ ಅಭಿಮಾನಿಗಳಿಂದ ರಸ್ತೆಯುದ್ದಕ್ಕೂ ಹೂವಿನ ಸುರಿಮಳೆ ಸುರಿಸಲಾಯಿತು.
ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಇದರ ಜವಾಬ್ದಾರಿ ಹೊತ್ತಿದ್ದು, ಖಾಕಿ ಪಡೆ ಸಂಪೂರ್ಣವಾಗಿ ಅಲರ್ಟ್ ಆಗಿದೆ. ಇನ್ನು, ಬಿಡದಿಯಲ್ಲಿ ಮುತ್ತಪ್ಪ ರೈ ಅಂತ್ಯಕ್ರಿಯೆ ನಡೆಯಲಿದ್ದು, 25 ಜನರಿಗಿಂತ ಅಧಿಕ ಜನರು ಸೇರದಂತೆ ಕುಟುಂಬಸ್ಥರು ಹಾಗೂ ಬೆಂಬಲಿಗರು ಮನವಿ ಮಾಡಿದ್ದಾರೆ. ಇದರ ಜೊತೆ ಬಿಡದಿ ಪೊಲೀಸರು ಜಾಗೃತಿ ವಹಿಸಲಿದ್ದಾರೆ.
TAGGED:
ಪೂರ್ವ ವಿಭಾಗ ಡಿಸಿಪಿ ಶರಣಪ್ಪ