ಬೆಂಗಳೂರು: ರಾಜ್ಯ ರಾಜಧಾನಿ ಗಲಭೆ ವೇಳೆ ಶಾಸಕ ಅಖಂಡ ಶ್ರೀನಿವಾಸ್ ಮುಂದೆ ಇದ್ದ ಹಿಂದೂ ದೇವಾಲಯವನ್ನು ಮುಸ್ಲಿಂ ಯುವಕರು ಮಾನವ ಸರಪಳಿ ಮಾಡಿ ಸುತ್ತುವರೆದು ಯಾವುದೇ ಹಾನಿಯಾಗದಂತೆ ತಡೆದಿದ್ದಾರೆ.
ಗಲಭೆ ಮಧ್ಯೆ ದೇವಾಲಯಕ್ಕೆ ಹಾನಿಯಾಗದಂತೆ ತಡೆದ ಮುಸ್ಲಿಂ ಯುವಕರು..! - KG halli and DJ halli riot
ಬೆಂಗಳೂರು ನಿನ್ನೆ ಹೊತ್ತಿ ಉರಿದಿದೆ. ದೊಡ್ಡ ಗಲಭೆ ನಡುವೆಯೂ ಮುಸ್ಲಿಂ ಯುವಕರು ಹಿಂದೂ ದೇವಾಲಯಕ್ಕೆ ಯಾವುದೇ ಹಾನಿಯಾಗದಂತೆ ತಡೆದು ಸಾಮಾಜಿಕ ಸಾಮರಸ್ಯ ಮೆರೆದಿದ್ದಾರೆ.
ದೇವಾಲಯಕ್ಕೆ ಹಾನಿಯಾಗದಂತೆ ತಡೆದ ಮುಸಲ್ಮಾನ ಯುವಕರು..!
ಮಹಮ್ಮದ್ ನುಅಮ್ಮಿರ್ ಎಂಬಾತ ಟ್ವೀಟ್ ಮಾಡಿದ್ದು, ಇವರು ನಮ್ಮ ಭಾರತದ ಮುಸ್ಲಿಂರು, ಮಾನವ ಸರಪಳಿ ಮಾಡಿ ದೇವಾಲಯವನ್ನು ಹಿಂಸಾಚಾರದಿಂದ ರಕ್ಷಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಮಾನವ ಸರಪಳಿಯಲ್ಲಿ ಭಾಗಿಯಾಗಿದ್ದ ಯುವಕ ಮಾತನಾಡಿ, ನಾವು ಜಾತಿ, ಧಮಕ್ಕಾಗಿ ಯಾವುದೇ ಪ್ರತಿಭಟನೆ ಮಾಡ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೇವಲ ಶಾಸಕನ ಸಂಬಂಧಿಕನ ಅವಹೇಳನಕಾರಿ ಪೋಸ್ಟ್ ವಿರುದ್ಧ ಅಷ್ಟೇ ಗಲಾಟೆ ಮಾಡುತ್ತಿದ್ದೇವೆ. ದೇವಸ್ಥಾನವನ್ನು ರಕ್ಷಣೆ ಮಾಡ್ತೇವೆ. ತೊಂದರೆ ಕೊಡೋದಿಲ್ಲ ಎಂದಿದ್ದ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated : Aug 12, 2020, 1:13 PM IST