ಬೆಂಗಳೂರು: ಪೌಷ್ಠಿಕಾಂಶಯುಕ್ತ ಅಣಬೆಯನ್ನು ಆಹಾರದಲ್ಲಿ ಬಳಸುವುದರಿಂದ ಆರೋಗ್ಯ ವೃದ್ಧಸಲಿದೆ. ಇದರಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿರುವ ಐಐಹೆಚ್ಆರ್ ವಿಜ್ಞಾನಿಗಳು 7 ಬಗೆಯ ಚಟ್ನಿ ಪುಡಿಗಳನ್ನು ಬಿಡುಗಡೆ ಮಾಡಿದ್ದಾರೆ. ರುಚಿ ಮತ್ತು ಪ್ರೋಟೀನ್ನಿಂದ ಕೂಡಿರುವ ಅಣಬೆ ಚಟ್ನಿ ಪುಡಿಗಳು ತೋಟಗಾರಿಕಾ ಮೇಳದಲ್ಲಿ ಗಮನ ಸೆಳೆದವು.
ಅಣಬೆ ಕುರಿತಂತೆ ಮಾಹಿತಿ ನೀಡಿದ ವಿಜ್ಞಾನಿ ದಕ್ಷಿಣಭಾರತದಲ್ಲಿ ಅಣಬೆ ತಿನ್ನುವ ಅಭ್ಯಾಸ ಕಡಿಮೆ ಇದೆ. ಇದಕ್ಕೆ ಅಣಬೆ ಬಗ್ಗೆ ನಮ್ಮ ಸಮಾಜದಲ್ಲಿರುವ ಮೂಢನಂಬಿಕೆ, ತಾಜಾ ಅಣಬೆಗಳು ಮಾರುಕಟ್ಟೆಯಲ್ಲಿ ಸಿಗದೆ ಇರುವುದೇ ಕಾರಣವಾಗಿದೆ. ಆದರೆ ಇದು ಸಾಕಷ್ಟು ಪ್ರೋಟೀನ್ ಭರಿತವಾಗಿದ್ದು, ನಮ್ಮ ನಿತ್ಯ ಜೀವನಲ್ಲಿ ಅಳವಡಿಕೊಂಡು ಸೇವಿಸಿದರೆ ದೇಹಕ್ಕೆ ಉತ್ತಮ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.
ಈ ಬಗ್ಗೆ ಸಂಶೋಧನೆ ನಡೆಸಿದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ವಿಜ್ಞಾನಿಗಳು, ಅಣಬೆಯನ್ನು ಮೌಲ್ಯವರ್ಧಿತ ಉತ್ಪನ್ನವಾಗಿ ಮಾಡಿ ಸುಮಾರು 7 ಬಗೆಯ ಚಟ್ನಿ ಪುಟಿಗಳನ್ನು ಬಿಡುಗಡೆ ಮಾಡಿದ್ದಾರೆ. ಅಣಬೆ ಕಡ್ಲೆಬೀಜದ ಚಟ್ನಿ ಪುಡಿ, ಅಣಬೆ ಒಂದೆಲಗ ಚಟ್ನಿಪುಡಿ, ಅಣಬೆ ನುಗ್ಗೆಸೊಪ್ಪು ಚಟ್ನಿ ಪುಡಿ, ಅಣಬೆ ತೆಂಗಿನಕಾಯಿ ಚಟ್ನಿಪುಡಿ, ಅಣಬೆ ಅಗಸೆಬೀಜದ ಚಟ್ನಿಪುಡಿ, ಅಣಬೆ ಕರಿಎಳ್ಳು ಚಟ್ನಿಪುಡಿ, ಅಣಬೆ ಬಿಳಿಎಳ್ಳು ಚಟ್ನಿಪುಡಿ ಹೀಗೆ ವಿವಿಧ ರೀತಿಯ ಚಟ್ನಿಗಳನ್ನು ತಯಾರಿಸಿದ್ದಾರೆ.
ಓದಿ: ಡಿವೈಎಸ್ಪಿ, ಇನ್ಸ್ಪೆಕ್ಟರ್ಗಳ ವರ್ಗಾವಣೆ: ಡಿಜಿಪಿ ಪ್ರವೀಣ್ ಸೂದ್ ಆದೇಶ
ಅಣಬೆಯ ಚಟ್ನಿಪುಡಿಗಳು ನಾಲಿಗೆಗೆ ರುಚಿ ಕೊಡುವುದರ ಜೊತೆಗೆ ದೇಹಕ್ಕೆ ಪೌಷ್ಠಿಕಾಂಶ ನೀಡುತ್ತವೆ. ಇವು ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ಎಲ್ಲರ ಗಮನ ಸೆಳೆದವು.