ಬೆಂಗಳೂರು:ಖಾರದ ಪುಡಿ ಎರಚಿ ತಡರಾತ್ರಿ ರೌಡಿಶೀಟರ್ವೋರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ, ಯಲಹಂಕ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.
ಖಾರದ ಪುಡಿ ಎರಚಿ ಬೆಂಗಳೂರಲ್ಲಿ ರೌಡಿಶೀಟರ್ ಬರ್ಬರ ಹತ್ಯೆ
ಬೆಂಗಳೂರಿನಲ್ಲಿ ನಿನ್ನೆ ತಡರಾತ್ರಿ ದುಷ್ಕರ್ಮಿಗಳ ಗುಂಪೊಂದು ರೌಡಿಶೀಟರ್ಗೆ ಖಾರದ ಪುಡಿ ಎರಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಯಲಹಂಕದ ದಿಲೀಪ್ ಕೊಲೆಯಾಗೀಡಾಗಿರುವ ರೌಡಶೀಟರ್. ಈತನ ಮೇಲೆ ಸರಗಳ್ಳತನಗಳ ಹಿನ್ನೆಲೆಯಲ್ಲಿ ಯಲಹಂಕ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿತ್ತು. ಯಲಹಂಕದ ಸುತ್ತಮುತ್ತಲಿನಲ್ಲಿ ಅಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ಸರಗಳ್ಳತನ ಪ್ರಕರಣದಲ್ಲಿ ರೌಡಿಪಟ್ಟಿಯಲ್ಲಿ ಗುರ್ತಿಸಿಕೊಂಡಿದ್ದ ದಿಲೀಪ್, ಇತ್ತೀಚೆಗೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದೇ ಆಟೋ ಓಡಿಸಿಕೊಂಡು ಇದ್ದ. ನಿನ್ನೆ ರಾತ್ರಿ ಮನೆಗೆ ಹೋಗದೆ ರಸ್ತೆ ಬದಿಯಲ್ಲೇ ಮಲಗಿದ್ದ ಈತನ ಮೇಲೆ ಐದಾರು ಜನ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಮುಖಕ್ಕೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಮುಖ ಗುರುತು ಸಿಗದ ರೀತಿ ಕೊಲೆ ಮಾಡಿ, ಪರಾರಿಯಾಗಿದ್ದಾರೆ.
ಹಳೇ ವೈಷಮ್ಯದ ಹಾಗೂ ವಿವಾಹೇತರ ಸಂಬಂಧ ಹಿನ್ನಲೆ ಕೊಲೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.