ಬೆಂಗಳೂರು: ನಾಡಿನಲ್ಲಿ ತಮ್ಮದೇ ಆದ ಸೇವೆಯನ್ನು ಮಾಡಿ ಹೆಸರಾಗಿದ್ದ ಇಬ್ಬರು ಗಣ್ಯ ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ.
ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಕೊಲೆಗೆ ಸ್ಕೆಚ್? ದಕ್ಷಿಣಾ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆಯನ್ನ ಕೊಲೆ ಮಾಡಲು ಯೋಜನೆ ರೂಪಿಸಲಾಗಿತ್ತು ಎನ್ನಲಾಗಿದೆ. ಆದರೆ ಈ ವಿಷಯವನ್ನ ಪೊಲೀಸರು ಅಧಿಕೃತವಾಗಿಯೇನು ಹೇಳಿಲ್ಲ. ಆದರೆ ಪೊಲೀಸ್ ಆಂತರಿಕ ಮೂಲಗಳು ಇವರೇ ಎಂದು ಹೇಳುತ್ತಿವೆ. ಇನ್ನು ಈ ಪ್ಲಾನ್ ಮಿಸ್ ಆದ ಹಿನ್ನೆಲೆ ಆರ್ ಎಸ್ ಕಾರ್ಯಕರ್ತ ವರುಣ್ ಮೇಲೆ ಹಲ್ಲೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಡಿಪಿಐ ಕಾರ್ಯಕರ್ತರನ್ನ ಬಂಧನ ಮಾಡುವಲ್ಲಿ ಪಶ್ಚಿಮ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ. ಇರ್ಫಾನ್ ಅಲಿಯಾಸ್ ಮೊಹಮ್ಮದ್, ಸೈಯದ್ ಅಕ್ಬರ್, ಸೈಯದ್ ಸಿದ್ದಿಕ್ ಅಕ್ಬರ್, ಅಕ್ಬರ್ ಪಾಷಾ, ಸನಾ, ಸಾಧಿಕ್ ಬಂಧಿತ ಆರೋಪಿಗಳು .
ಹಿನ್ನೆಲೆ:ಸಿಎಎ ಮತ್ತು ಎನ್ ಆರ್ ಸಿ ಕಾನೂನು ಬೆಂಬಲಿಸುವ ಉದ್ದೇಶದಿಂದ ಕಳೆದ 22ರಂದು ನಗರದ ಟೌನ್ ಹಾಲ್ ಬಳಿ ಸಮಾವೇಶ ಕೈಗೊಳ್ಳಲಾಗಿತ್ತು. ಸಮಾವೇಶಕ್ಕೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ ಮತ್ತು ವಾಗ್ಮಿ, ಯುವ ಬ್ರೀಗೆಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮತ್ತು ಆರ್ಎಸ್ ಕಾರ್ತಕರ್ತರಾದ ವರುಣ್ ಭಾಗವಹಿಸಿದ್ರು.
ಎನ್ ಆರ್ ಸಿ ಪರ ಧ್ವನಿ ಎತ್ತುತ್ತಿದ್ದ ಪ್ರಮುಖರನ್ನ ಇವರು ಟಾರ್ಗೆಟ್ ಮಾಡುತ್ತಿದ್ದರಂತೆ. ಅಂದು ಆಯೋಜನೆ ಮಾಡಿದ್ದ ಸಮಾವೇಶದಲ್ಲಿ ಕಲ್ಲು ತೂರಾಟ ಕೂಡ ಮಾಡಿದ್ರು. ಏಳು ಕಲ್ಲುಗಳು ಜನರ ಮೇಲೆ ಬಿದ್ದು, ಜನರು ಚದುರಿದಾಗ ಚಕ್ರವರ್ತಿ ಸೂಲಿಬೆಲೆ ಅಥವಾ ತೇಜಸ್ವಿ ಸೂರ್ಯ ಅವರನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದರಂತೆ. ಆದ್ರೆ, ಅಲ್ಲಿ ಪೊಲೀಸರು ಅಲರ್ಟ್ ಆದರೂ ಕೂಡ ಮೂವರಲ್ಲಿ ಯಾರನ್ನಾದರೂ ಮುಗಿಸಲೇಬೆಕೆಂಬ ಪಣ ತೊಟ್ಟಿದ್ದರಂತೆ. ಈ ಪ್ಲಾನ್ ಫೇಲ್ ಆದ ಹಿನ್ನೆಲೆ ಆರ್ಎಸ್ ಕಾರ್ಯಕರ್ತ ವರುಣ್, ಬೌನ್ಸ್ ಗಾಡಿಯಲ್ಲಿ ಕಲಾಸಿಪಾಳ್ಯದ ಹೊಸ ಬಡಾವಣೆಯ ಕುಂಬಾರ ಗುಂಡಿ ಬಳಿ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ವೇಳೆ ಅಡ್ಡ ಗಟ್ಟಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಹಲ್ಲೆ ಮಾಡಿ ಪರಾರಿಯಾಗಿದ್ರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆಯಂತೆ.
ಪ್ರಕರಣದ ಗಂಭೀರತೆ ಅರಿತು ಪಶ್ಚಿಮ ವಿಭಾಗ ಪೊಲೀಸರು ತಂಡ ರಚನೆಮಾಡಿ, ಪಶ್ಚಿಮ ವಿಭಾಗ ಡಿಸಿಪಿ ಉಮೇಶ್ ಕುಮಾರ್ ಅವರ ನೇತೃತ್ವದಲ್ಲಿ ಆರೋಪಿಗಳನ್ನ ಬಂಧನ ಮಾಡಿದ್ದಾರೆ. ಬಂಧಿತರನ್ನ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಎಸ್ಡಿಪಿಐ ಕಾರ್ಯಕರ್ತರಾಗಿದ್ದು , ಮುಸ್ಲಿಂ ಧರ್ಮದ ಕಟ್ಟಾ ಅನುಯಾಯಿಗಳಾಗಿದ್ದಾರೆ. ಎನ್. ಆರ್ ಸಿ ಪರ ಧ್ವನಿ ಎತ್ತುವವರೇ ಇವರ ಟಾರ್ಗೆಟ್ ಆಗಿದ್ದು, ತೇಜಸ್ವಿ ಸೂರ್ಯ ಹಾಗೂ ಸೂಲಿಬೆಲೆ ಕೊಲೆ ಮಾಡಲು ಫ್ಲಾನ್ ಮಾಡಿದ್ದು, ಈ ಪ್ಲಾನ್ ಯಶಸ್ಸು ಕಂಡಿಲ್ಲ ಎಂದು ಪೊಲೀಸ್ ಆಂತರಿಕ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಆದರೆ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಬಂಧನದ ಮಾಹಿತಿಯನ್ನಷ್ಟೇ ಹಂಚಿಕೊಂಡಿದ್ದಾರೆ.
ಬೈಕ್ನಲ್ಲಿ ಸಂಚರಿಸುತ್ತಿರುವ ಆರೋಪಿಗಳು ಪ್ರಕರಣದಿಂದ ತಪ್ಪಿಸಿಕೊಳ್ಳಲು ಪ್ಲಾನ್:
ಪ್ರಕರಣದಲ್ಲಿ ಪೊಲೀಸ್ ಕಣ್ಣಿಗೆ ಮಣ್ಣೆರಚಲು ತಾವು ಉಪಯೋಗಿಸುತ್ತಿದ್ದ ಮೊಬೈಲ್ನ್ನ ಮನೆಯಲ್ಲಿಯೇ ಆನ್ ಮಾಡಿ ಇಟ್ಟು ಫೀಲ್ಡ್ಗೆ ಇಳಿದಿದ್ದಾರೆ. ಇದಾದ ನಂತ್ರ ತಮ್ಮ ಚಹರೆ ಮರೆಮಾಚಲು ಹೆಲ್ಮೇಟ್ ಧರಿಸಿದ್ದಾರೆ. ಹಾಗೆ ವಾಹನದ ನಂಬರ್ಗಳನ್ನು ಕೂಡ ಮರೆ ಮಾಚಲು ಕಪ್ಪು ಬಣ್ಣದ ಮಸಿಯನ್ನು ನಂಬರ್ ಪ್ಲೇಟ್ಗೆ ಹಚ್ಚಿದ್ದಾರೆ. ಪ್ರತಿಯೊಬ್ಬ ಆರೋಪಿ ಒಂದರ ಮೇಲೊಂದರಂತೆ ಮೂರು ಟೀ ಶರ್ಟ್ಗಳನ್ನು ಧರಿಸಿದ್ದರಂತೆ. ಕೃತ್ಯದ ನಂತರ ಎರಡು ಶರ್ಟ್ಗಳನ್ನು ತೆಗೆದು ರಸ್ತೆಬದಿ ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ. ಇದೆಲ್ಲ ಆದ ನಂತರ ಕೃತ್ಯಕ್ಕೆ ಬಳಸಿದ ಅಸ್ತ್ರಗಳನ್ನು ನೈಸ್ ರಸ್ತೆ ಬಳಿ ಇರುವ ಅಂಚೆಪಾಳ್ಯ ಕೆರೆಯಲ್ಲಿ ಬಿಸಾಡಿದ್ದಾರೆ. ಹೆಲ್ಮೇಟ್ ಗಳನ್ನು ರಾಮಮೂರ್ತಿ ನಗರ ಹೊಂಡ ಒಂದಕ್ಕೆ ಹಾಕಿ, ಶೂಗಳನ್ನು ಬಾಣಸಾವಡಿ ಬಳಿಯ ಮೋರಿಗೆ ಎಸೆದು ಬಳಕೆ ಮಾಡಿದ್ದ ಬೈಕ್ಗಳನ್ನು ಬಚ್ಚಿಟ್ಟಿದ್ದಾರೆ. ಸದ್ಯ ಆರೋಪಿಗಳನ್ನ ಹೆಚ್ವಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.