ಕರ್ನಾಟಕ

karnataka

ETV Bharat / state

ಜೈಲಿನಿಂದ ಹೊರ ಬಂದ ರೌಡಿಶೀಟರ್​ ಅನ್ನು ಪರಲೋಕಕ್ಕೆ ಕಳಿಸಿದ ಎದುರಾಳಿಗಳು​:​ ಬೆಚ್ಚಿದ ಬೆಂಗಳೂರು - ಸಾಬು ಎಂಬ ರೌಡಿಶೀಟರ್​​​ನ ಬರ್ಬರ ಹತ್ಯೆ

ಡಬಲ್ ಮರ್ಡರ್ ಪ್ರಕರಣವೊಂದರಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಸಾಬು ಎಂಬ ರೌಡಿಶೀಟರ್, ನ್ಯಾಯಾಲಯದಿಂದ ನಿರ್ದೋಶಿಯಾಗಿ ಹೊರ ಬಂದ ಬಳಿಕ ಬರ್ಬರವಾಗಿ ಕೊಲೆಯಾಗಿದ್ದಾನೆ.

Murder of Rowdisheater  in bangalore
ಜೈಲಿನಿಂದ ಹೊರ ಬಂದ ರೌಡಿಶೀಟರ್​​​ನ ಬರ್ಬರ ಹತ್ಯೆ

By

Published : May 29, 2020, 12:43 PM IST

ಬೆಂಗಳೂರು: ಲಾಕ್​​​​ಡೌನ್ ಸಡಿಲಿಕೆಯಾಗ್ತಿದ್ದಂತೆಗುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ರೌಡಿಸಂ ಚಟುವಟಿಕೆಗಳು ಗರಿಗೆದರುತ್ತಿವೆ. ಡಬಲ್ ಮರ್ಡರ್ ಪ್ರಕರಣವೊಂದರಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಸಾಬು ಎಂಬ ರೌಡಿಶೀಟರ್, ನ್ಯಾಯಾಲಯದಿಂದ ನಿರ್ದೋಶಿಯಾಗಿ ಹೊರ ಬಂದ ಬಳಿಕ ಬರ್ಬರವಾಗಿ ಕೊಲೆಯಾಗಿದ್ದಾನೆ.

ಎದುರಾಳಿಗಳ‌ ಗುಂಪೊಂದು ಸಾಬುವಿನ ಚಟುವಟಿಕೆಗಳನ್ನು, ಗಮನಿಸಿ ಕೊಲೆ‌ಮಾಡಲು ಸ್ಕೇಚ್ ಹಾಕಿದ್ದರು. ನಂತರ ನಿನ್ನೆ ‌ತಡರಾತ್ರಿ‌ ತಲಘಟ್ಟಪುರ ಠಾಣಾ ವ್ಯಾಪ್ತಿಯ ಅವಲಹಳ್ಳಿಯ ಬಳಿ ಸಾಬು‌ನನ್ನು ಹೊರಗಡೆ ಕರೆದು ಎದುರಾಳಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ.

ಸದ್ಯ ತಲಘಟ್ಟಪುರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಶಂಕೆ‌‌ಯ ಮೇರೆಗೆ ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಸಾಬು‌‌ ಮೇಲೆ ನಗರದಲ್ಲಿ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಿದ್ದು ತನಿಖೆ ಮುಂದುವರೆದಿದೆ.

ABOUT THE AUTHOR

...view details