ಕರ್ನಾಟಕ

karnataka

ETV Bharat / state

ತಲೆಯನ್ನು ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ.. ದೇವನಹಳ್ಳಿ ಬಳಿ ನಗ್ನ ಸ್ಥಿತಿಯಲ್ಲಿ ಶವ ಪತ್ತೆ - ETV Bharath Karnataka

ತಲೆಯನ್ನು ಮಚ್ಚಿನಿಂದ ವ್ಯಕ್ತಿಯ ಬರ್ಬರ ಕೊಲೆ - ಭಾನುವಾರ ರಾತ್ರಿ ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ಶವ ಎಸೆದಿರುವ ಶಂಕೆ - ವಿಕೃತವಾಗಿ ಕೊಲೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್​​

murder-of-an-unknown-person-in-bangalore
Etv Bharatವ್ಯಕ್ತಿ ಗುರುತಿಗಾಗಿ ಪೊಲೀಸರ ಶೋಧ

By

Published : Jan 2, 2023, 3:23 PM IST

Updated : Jan 2, 2023, 3:46 PM IST

ತಲೆ ಕೊಚ್ಚಿ ಬರ್ಬರ ಕೊಲೆ, ನಿರ್ಜನ ಪ್ರದೇಶದಲ್ಲಿ ಶವ ಎಸೆದು ಎಸ್ಕೇಪ್​

ದೇವನಹಳ್ಳಿ(ಬೆಂಗಳೂರು):ತಲೆಯನ್ನು ಮಚ್ಚಿನಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ ಗೇಟ್​ ಬಳಿ ನಡೆದಿದೆ. ಸುಮಾರು 40 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿ ಇಲ್ಲಿನ ನಿರ್ಜನ ಪ್ರದೇಶದಲ್ಲಿ ಹಂತಕರು ಮೃತದೇಹ ಎಸೆದು ಹೋಗಿದ್ದಾರೆ.

ಇನ್ನು ತಲೆಯನ್ನು ಮಚ್ಚಿನಿಂದ ಕೊಚ್ಚಿದ್ದು, ಬೆರಳುಗಳನ್ನು ಸಹ ಕತ್ತರಿಸಲಿಸಲಾಗಿದೆ. ಅಲ್ಲದೆ ದೇಹವನ್ನು ಬೆತ್ತಲೆಗೊಳಿಸಿ ನಗರದ ಹೊರವಲಯದಲ್ಲಿ ಎಸೆದು ಹೋಗಿದ್ದಾರೆ. ಬೇರೆಡೆ ಕೊಲೆ ಮಾಡಿ ಶವ ಬಿಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರಿಗೆ ಯಾವುದೇ ಕೊಲೆ ಸಾಕ್ಷಿಗಳು ಸಿಗದಂತೆ ಆರೋಪಿಗಳು ಪ್ಲಾನ್​ ಮಾಡಿ ಹೈತ್ಯೆಗೈದಿದ್ದಾರೆ.

ಇಂದು ಬೆಳಗ್ಗೆ ತೋಟಕ್ಕೆ ತೆರಳುತ್ತಿದ್ದ ಆವತಿ ಗ್ರಾಮದ ಅನಿಲ್​ ಕುಮಾರ್​ ಎಂಬುವರು ಮೃತದೇಹ ನೋಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ವಿಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

'ವಿಜಯಪುರ ಠಾಣಾ ವ್ಯಾಪ್ತಿಯ ಬುಲ್ಲ ಹಳ್ಳಿ ಸರ್ವೆ ನಂಬರ್​ಗೆ ಸೇರಿದ ಜಾಗದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಈ ಜಾಗ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 200 ಮೀಟರ್​ ದೂರದಲ್ಲಿದೆ. ನಿರ್ಜನ ಪ್ರದೇಶದಲ್ಲಿ ನಿನ್ನೆ ರಾತ್ರಿ ಅಥವಾ ಮುಂಜಾನೆ ವೇಳೆ ಶವ ತಂದು ಹಾಕಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳೀಯರೊಬ್ಬರು ಶವ ಕಂಡು ಠಾಣೆಗೆ ಮಾಹಿತಿ ನೀಡಿದ್ದಾರೆ. ಮುಖ ಮತ್ತು ಕೈಗಳ ಮೇಲೆ ಕತ್ತಿ ಅಥವಾ ಮಚ್ಚಿನಿಂದ ಕೊಚ್ಚಲಾಗಿದೆ. ಬೇರೆಡೆ ಕೊಲೆ ಮಾಡಿ ಶವ ಇಲ್ಲಿ ತಂದು ಹಾಕಿರುವ ಸಾಧ್ಯತೆ ಇದೆ. ಶವದ ಗುರುತು ಮತ್ತು ಆರೋಪಿಗಳ ಪತ್ತೆ ಮಾಡುವ ಕೆಲಸ ಮಾಡುತ್ತೇವೆ' ಎಂದು ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಜತೆಗೆ ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಕೊಲೆಯಾಗಿರೋ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲು ಪೊಲೀಸರು ತಂಡವನ್ನು ರಚಿಸಿದ್ದಾರೆ.

ಇದನ್ನೂ ಓದಿ:ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಕೊಲೆ.. ಬೀದರ್​ ಜಿಲ್ಲೆಯಲ್ಲಿ ಹರಿದ ನೆತ್ತರು

Last Updated : Jan 2, 2023, 3:46 PM IST

ABOUT THE AUTHOR

...view details