ಕರ್ನಾಟಕ

karnataka

ETV Bharat / state

ಅಲಾಯನ್ಸ್‌ ವಿವಿಯ ವಿಶ್ರಾಂತ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣ: ಆರೋಪಿಗಳು ಕೋರ್ಟ್​ಗೆ ಹಾಜರು - ಕೋರ್ಟ್​ಗೆ ಹಾಜರು

ಅಲಾಯನ್ಸ್‌ ವಿವಿಯ ವಿಶ್ರಾಂತ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಧೀರ್ ಅಂಗೂರ್ ಮತ್ತು ಆತನ ಶಿಷ್ಯ ಸೂರಜ್ ಸಿಂಗ್​​ನನ್ನು ಪೊಲೀಸರು ಕೋರ್ಟ್​ಗೆ ಹಾಜರುಪಡಿಸಿದ್ದಾರೆ.

ಆರೋಪಿಗಳು ಕೋರ್ಟ್​ಗೆ ಹಾಜರು

By

Published : Oct 18, 2019, 6:23 AM IST

Updated : Oct 18, 2019, 7:04 AM IST

ಬೆಂಗಳೂರು: ಅಲಾಯನ್ಸ್ ವಿಶ್ವವಿದ್ಯಾಲಯ ಸದಾ ಒಂದಲ್ಲಾ ಒಂದು ರೀತಿಯ ವಿವಾದಗಳಿಗೆ ಕಾರಣವಾಗುತ್ತಿತ್ತು. ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ವಿಶ್ರಾಂತ ಕುಲಪತಿ ಅಯ್ಯಪ್ಪ ದೊರೆ ಕೊಲೆಯಲ್ಲಿ ಅಂತ್ಯಗೊಂಡಿದೆ.

ತಮ್ಮದೇ ಅಲಾಯನ್ಸ್‌ ವಿವಿಯ ವಿಶ್ರಾಂತ ಕುಲಪತಿ ಅಯ್ಯಪ್ಪ ದೊರೆ ಕೊಲೆ ಮಾಡಿಸಿದ್ದ. ಸುಧೀರ್ ಅಂಗೂರ್ ಮತ್ತು ಆತನ ಶಿಷ್ಯ ಸೂರಜ್ ಸಿಂಗ್​​ನನ್ನು ಕೋರ್ಟ್​ಗೆ ಹಾಜರುಪಡಿಸಿ ಮತ್ತಷ್ಟು ವಿಚಾರಣೆಗೆ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ವಿಶ್ರಾಂತ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣ

ಆರೋಪಿಗಳನ್ನು 32ನೇ ಎಸಿಎಂಎಂ ಕೋರ್ಟ್​ಗೆ ಪೊಲೀಸರು ಹಾಜರುಪಡಿಸಿದ್ದಾರೆ. ಅಲಾಯನ್ಸ್ ವಿಶ್ವವಿದ್ಯಾಲಯದಲ್ಲಿ ನಡೆದಿರಬಹುದಾದ ಮತ್ತಷ್ಟು ಹಗರಣಗಳನ್ನು ಪತ್ತೆ ಹಚ್ಚಲು ಪೊಲೀಸರು ಆರೋಪಿಗಳಿಬ್ಬರನ್ನು ತೀವ್ರ ತನಿಖೆಗೆ ಒಳಪಡಿಸಲಿದ್ದಾರೆ.

Last Updated : Oct 18, 2019, 7:04 AM IST

ABOUT THE AUTHOR

...view details