ಕರ್ನಾಟಕ

karnataka

ETV Bharat / state

ಸ್ನೇಹಿತನ ಮನೆ ಮುಂದೆ ಬೈಕ್​​ ವ್ಹೀಲಿಂಗ್​ ಮಾಡಿದ್ದನ್ನು ಪ್ರಶ್ನಿಸಿದವನ ಕೊಲೆ : ಆರು ಮಂದಿ ಆರೋಪಿಗಳ ಬಂಧನ - bengaluru murder case accuses arrested

ಸೂರ್ಯ ಹಾಗೂ ಚಂದನ್ ಎಂಬುವವರು ಲಕ್ಷ್ಮೀಕಾಂತ್​​ ಎಂಬಾತನ ಮನೆ ಮುಂದೆ ಬೈಕ್​ ವ್ಹೀಲಿಂಗ್​​ ಮಾಡುತ್ತಿದ್ದರು. ಇದನ್ನು ಲಕ್ಷ್ಮಿಕಾಂತ್ ಸ್ನೇಹಿತ ಪ್ರಶ್ನಿಸಿ, ಚಂದನ್ ತಂದೆಗೆ ಈ ಬಗ್ಗೆ ಹೇಳಿದ್ದ. ಇದರಿಂದ ಕೋಪಗೊಂಡ ಆತ ಸ್ನೇಹಿತರೊಂದಿಗೆ ಬಂದು​ ಡ್ರ್ಯಾಗರ್ ಹಾಗೂ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಇದೀಗ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ..

six arrested in murder case
ಆರು ಮಂದಿ ಆರೋಪಿಗಳ ಬಂಧನ

By

Published : Mar 18, 2022, 3:38 PM IST

ಬೆಂಗಳೂರು :ಲಕ್ಷ್ಮಿಕಾಂತ್ ಎಂಬಾತನ ಮನೆ ಮುಂದೆ ಆರೋಪಿಗಳಾದ ಸೂರ್ಯ ಹಾಗೂ ಚಂದನ್ ಎಂಬುವರು ಬೈಕ್ ವ್ಹೀಲಿಂಗ್​​​ ಮಾಡುತ್ತಿದ್ದರು. ಇದರಿಂದ ಕೋಪಗೊಂಡ ಲಕ್ಷ್ಮಿಕಾಂತ್​​ ಸ್ನೇಹಿತ ಥಾಮಸ್, ಆರೋಪಿ ಚಂದನ್​​ ತಂದೆ ಬಳಿ ಈ ವಿಷಯ ಹೇಳುತ್ತಾನೆ. ಇದರಿಂದ ಕೋಪಗೊಂಡ ಅವರು, ಸಹಚರರೊಂದಿಗೆ ಗುಂಪುಕಟ್ಟಿಕೊಂಡು ಬಂದು ಥಾಮಸ್​​ನನ್ನು ಕೊಲೆಗೈಯುತ್ತಾರೆ.

ಥಾಮಸ್​​ನನ್ನು ಕೊಲೆ ಮಾಡಿದ ಆರೋಪದಡಿ ಆರು ಮಂದಿ ಆರೋಪಿಗಳನ್ನು ಕೆ.ಪಿ.ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಕಳೆದ ವಾರ ಥಾಮಸ್ ಎಂಬಾತನ ಕೊಲೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದರು. ಬಳಿಕ ಇನ್​​ಸ್ಪೆಕ್ಟರ್ ಸದಾನಂದ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಸೂರ್ಯ, ಚಂದನ್, ಪ್ರಮೋದ್, ಯಶವಂತ್ ಹಾಗೂ ಚೇತನ್ ಸೇರಿ ಆರು ಜನ ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಿದ್ದರು.

ಆರು ಮಂದಿ ಕೊಲೆ ಆರೋಪಿಗಳ ಬಂಧನ..

ಪೈಪ್‌ಲೈನ್​​ನಲ್ಲಿ ವಾಸವಾಗಿದ್ದ ಥಾಮಸ್ ಅನಿಮೇಶನ್ ಕೋರ್ಸ್ ಮಾಡಿಕೊಂಡಿದ್ದ. ಇತ್ತೀಚೆಗೆ ಥಾಮಸ್ ಸ್ವಿಗ್ಗಿ ಕಂಪನಿಯಲ್ಲಿ ಸಹ ಕೆಲಸ ಮಾಡುತ್ತಿದ್ದ.

ಈತನ ಸ್ನೇಹಿತ ಲಕ್ಷ್ಮಿಕಾಂತ್ ಎಂಬಾತನ ಮನೆ ಮುಂದೆ ಆರೋಪಿಗಳಾದ ಸೂರ್ಯ ಹಾಗೂ ಚಂದನ್ ಬೈಕ್ ವ್ಹೀಲಿಂಗ್, ಸಿಗರೇಟ್​​ ಸೇದುವುದು ಸೇರಿದಂತೆ ಇನ್ನಿತರ ಅನೈತಿಕ ಚಟುವಟಿಕೆ ನಡೆಸುತ್ತಿದ್ದರು.

ಇದರಿಂದ ಅಸಮಾಧಾನಗೊಂಡಿದ್ದ ಲಕ್ಷ್ಮಿಕಾಂತ್, ಸ್ನೇಹಿತ ಥಾಮಸ್ ಬಳಿ ಹೇಳಿಕೊಂಡಿದ್ದ. ಇದೇ ವಿಚಾರಕ್ಕಾಗಿ ಎರಡು ಬಣಗಳ ನಡುವೆ ಮಾತಿನ ಚಕಮಕಿ ಉಂಟಾಗಿತ್ತು.

ಇದನ್ನೂ ಓದಿ:ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಕನ್ನಡಕ್ಕೆ ಡಬ್​​ ಮಾಡಬೇಕು : ಗೃಹ ಸಚಿವ ಆರಗ

ತದನಂತರ ಥಾಮಸ್​​ ಆರೋಪಿ ಚಂದನ್ ತಂದೆ ಬಳಿ ಹೋಗಿ ನಡೆದ ವಿಚಾರ ಹೇಳಿ, ಬುದ್ಧಿ ಹೇಳುವಂತೆ ಕೋರಿಕೊಂಡಿದ್ದ. ಈ ವಿಚಾರ ತಿಳಿದುಕೊಂಡ ಚಂದನ್, ಸಹಚರರೊಂದಿಗೆ ಬಂದು ಥಾಮಸ್ ಜೊತೆ ಗಲಾಟೆ ಮಾಡಿದ್ದ.

ಡ್ರ್ಯಾಗರ್ ಹಾಗೂ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿರುವ ಇನ್ನೂ ಮೂವರ ಪತ್ತೆಗೆ ಕೆ.ಪಿ.ಅಗ್ರಹಾರ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ABOUT THE AUTHOR

...view details