ಕರ್ನಾಟಕ

karnataka

ETV Bharat / state

ನಮಾಜ್ ಮುಗಿಸಿ ಹೊರ ಬಂದ ವ್ಯಕ್ತಿ ಮೇಲೆ‌ ಹಲ್ಲೆ: ಚಿಕಿತ್ಸೆ ಫಲಿಸದೇ ಸಾವು - ಚಿಕಿತ್ಸೆ ಫಲಿಸದೇ ಸಾವು

ಅನ್ಸರ್ ಪಾಷಾ ನಮಾಜ್​ ಮಾಡಲು ಮಸೀದಿಗೆ ತೆರಳಿದ್ದರು. ನಮಾಜ್ ಮುಗಿಸಿ ಹೊರ ಬರ್ತಿದ್ದಂತೆ ದುಷ್ಕರ್ಮಿಗಳು ಚೂಪಾದ ಆಯುಧದಿಂದ ಕುತ್ತಿಗೆಗೆ ಇರಿದು ಅನ್ಸರ್ ಪಾಷಾ ಮೇಲೆ ಅಟ್ಯಾಕ್ ಮಾಡಿದ್ದಾರೆ. ಚಿಕಿತ್ಸೆ ಫಲಿಸದೇ ಪಾಷಾ ಸಾವನ್ನಪ್ಪಿದ್ದಾರೆ.

pasha
pasha

By

Published : Jun 12, 2020, 9:34 AM IST

ಬೆಂಗಳೂರು:ನಮಾಜ್ ಮುಗಿಸಿ ಹೊರ ಬಂದಿದ್ದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಚಿಕಿತ್ಸೆ ಫಲಿಸದೇ ದಾಳಿಗೊಳಗಾದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸದ್ದು ಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅನ್ಸರ್ ಪಾಷಾ (50) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.

ಗುರಪ್ಪನಪಾಳ್ಯದ ಮಸೀದಿಗೆ ಪಾಷಾ ನಮಾಜ್​ಗೆ ತೆರಳಿದ್ದರು. ನಮಾಜ್ ಮುಗಿಸಿ ಹೊರ ಬರ್ತಿದ್ದ ಹಾಗೆ ದುಷ್ಕರ್ಮಿಗಳು ಚೂಪಾದ ಆಯುಧದಿಂದ ಕುತ್ತಿಗೆ ಇರಿದು ಅನ್ಸರ್ ಪಾಷಾ ಮೇಲೆ ಅಟ್ಯಾಕ್ ಮಾಡಿದ್ದಾರೆ.

ತಕ್ಷಣ ಮಸೀದಿಯ ಬಳಿ ಇದ್ದವರು ಆಸ್ಪತ್ರೆಗೆ ಕರೆದೊಯ್ದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪಾಷಾನಿಗೆ ತೀವ್ರ ಗಾಯವಾದ ಕಾರಣ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ರಿಯಲ್ ಎಸ್ಟೇಟ್ ವ್ಯವಹಾರವನ್ನ ಅನ್ಸರ್ ಪಾಷಾ ನೋಡಿಕೊಳ್ಳುತ್ತಿದ್ದು, ಇದೇ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ಇದೆ ಎಂಬ ಅಂಶ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.

ABOUT THE AUTHOR

...view details