ಕರ್ನಾಟಕ

karnataka

ETV Bharat / state

ಕೇವಲ 40, 50 ರೂಪಾಯಿಗೆ ಬೆಂಗಳೂರಲ್ಲಿ ಹಾಡಹಗಲೇ ಬಾಲಕನ ಬರ್ಬರ ಕೊಲೆ - ಲೆಟೆಸ್ಟ್ ಬೆಂಗಳೂರು ಕೊಲೆ ನ್ಯೂಸ್

ಬೆಂಗಳೂರಲ್ಲಿ ಮತ್ತೆ ನೆತ್ತರು ಹರಿದಿದೆ. 40, 50 ರೂಪಾಯಿಗೆ ಹಾಡಹಗಲೇ ಬಾಲಕನೋರ್ವ ಬರ್ಬರವಾಗಿ ಕೊಲೆಗೀಡಾಗಿದ್ದಾನೆ.

ಕೇವಲ 40, 50 ರೂಪಾಯಿಗೆ ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ನಡೆಯಿತು ಬರ್ಬರ ಹತ್ಯೆ

By

Published : Nov 6, 2019, 5:28 PM IST

ಬೆಂಗಳೂರು:40, 50 ರೂಪಾಯಿಗೆ ಹಾಡಹಗಲೇ ನೆತ್ತರು ಹರಿದಿದೆ. ನಗರದ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಬೆಚ್ಚಿಬೀಳಿಸುವ ಪ್ರಕರಣ ನಡೆದಿದೆ.

16 ವರ್ಷದ ಮಹಮ್ಮದ್ ವಾಸಿಂ ಕೊಲೆಯಾಗಿರುವ ಬಾಲಕ. ಡಿಜೆ ಹಳ್ಳಿಯ ಮೋದಿ ರಸ್ತೆಯಲ್ಲಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮಹಮ್ಮದ್ ವಾಸಿಂ ಸ್ನೇಹಿತರು ಮೂವರು ಗಾಡಿಯಲ್ಲಿ ಬಂದು ಕೊಲೆಯಾದ ಬಾಲಕನ ಬಳಿ 40 , 50, ರೂಪಾಯಿ ಕೊಡುವಂತೆ ಕೇಳಿದ್ದರು. ಇದಕ್ಕೆ ಮಹಮ್ಮದ ಹಣ ಇಲ್ಲವೆಂದು ಹೇಳಿದ್ದಾನೆ. ಇಷ್ಟಕ್ಕೆ ಕೆರಳಿದ ದುಷ್ಕರ್ಮಿಗಳು ಬೈಕ್​ನಿಂದ ಕೆಳಗಿಳಿದು ಚಾಕುವಿನಿಂದ ಮಹಮ್ಮದ್ ವಾಸಿಂ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ವಿಚಾರ ತಿಳಿದು ಘಟನಾ ಸ್ಥಳಕ್ಕೆ ಪೂರ್ವ ವಿಭಾಗ ಡಿಸಿಪಿ ಡಾ. ಶರಣಪ್ಪ ಭೇಟಿ ನಿಡಿ ಪರಿಶೀಲಿಸಿದ್ದಾರೆ. ಹಾಗೆಯೇ ಆರೋಪಿಗಳು ಗಾಂಜಾ ಮತ್ತಿನಲ್ಲಿ ಈ ರೀತಿ ಮಾಡಿರುವ ಶಂಕೆ ಕೂಡ ಪೊಲೀಸರಿಗೆ ವ್ಯಕ್ತವಾಗಿದೆ. ಸದ್ಯ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ.

ABOUT THE AUTHOR

...view details