ಕರ್ನಾಟಕ

karnataka

ETV Bharat / state

ಅಕ್ಕನನ್ನು ಪ್ರೀತಿಸಿ ಓಡಿ ಹೋಗಿದ್ದ ಸ್ನೇಹಿತನನ್ನೇ ಹತ್ಯೆ ಮಾಡಿದ ಯುವಕ! - ದೊಡ್ಡಬಳ್ಳಾಪುರ ಸುದ್ದಿ

ಹತ್ಯೆ ಸಂಬಂಧ ಪೊಲೀಸರು ಆರೋಪಿಗಳಾದ ಹೇಮಂತ್, ತಿಮ್ಮರಾಜು, ನವೀನ, ಸಂಜಯ್, ನಿಕಿಲ್, ವಾಸೀಫ್ ಮತ್ತು ಪ್ರವೀಣ್ ಅವರನ್ನು ಬಂಧಿಸಿದ್ದಾರೆ. ಪರಾರಿ ಆಗಿರುವ ಪ್ರಜ್ವಲ್, ಮಿಥುನ್, ಗಣೇಶ, ನಂದನ್, ಪವನ್ ಮತ್ತು ಜೀಷಾನ್ ಪತ್ತೆಗೆ ತಂಡ ರಚಿಸಿದ್ದಾರೆ.

murder in doddaballapur
ಅಕ್ಕನನ್ನು ಪ್ರೀತಿಸಿದ ಕಾರಣ ಸ್ನೇಹಿತನನ್ನೇ ಕೊಂದ ಯುವಕ

By

Published : Oct 15, 2020, 8:35 PM IST

ದೊಡ್ಡಬಳ್ಳಾಪುರ:ಅಕ್ಕನನ್ನು ಪ್ರೀತಿಸಿ ಓಡಿ ಹೋಗಿದ್ದ ಸ್ನೇಹಿತನನ್ನು ಯುವಕನೋರ್ವ ತನ್ನ ಗೆಳೆಯರೊಂದಿಗೆ ಸೇರಿ ಹತ್ಯೆ ಮಾಡಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊನ್ನಘಟ್ಟದಲ್ಲಿ ನಡೆದಿದೆ.

ಹತ್ಯೆಯಾದ ಚೇತನ್​​, ಪ್ರಜ್ವಲ್​​ ಎಂಬುವವರ ಸಹೋದರಿಯನ್ನು ಪ್ರೀತಿಸುತ್ತಿದ್ದ. ಇವರ ಪ್ರೀತಿ ಪ್ರಜ್ವಲ್​​ಗೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಪ್ರೇಮಿಗಳಿಬ್ಬರು ಮನೆ ಬಿಟ್ಟು ಓಡಿ ಹೋಗಿದ್ದರು. ಕ್ಯಾಮರಾ ಕೊಡುವುದಾಗಿ ಹೇಳಿದ ಚೇತನ್, ಪ್ರಜ್ವಲ್​ ​​​​​​ನನ್ನು ಕರೆಯಿಸಿ ತನ್ನ ಸಂಗಡಿಗರೊಂದಿಗೆ ಕೊಲೆ ಮಾಡಿದ್ದಾನೆ ಎಂಬ ಆರೋಪವಿದ್ದು, ದೊಡ್ಡಬಳ್ಳಾಪುರ ಉಪ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಕನನ್ನು ಪ್ರೀತಿಸಿದ ಕಾರಣ ಸ್ನೇಹಿತನನ್ನೇ ಕೊಂದ ಯುವಕ

ಅಕ್ಕನ ಪ್ರೀತಿಗೆ ವಿರೋಧಿಸಿದ್ದ ಪ್ರಜ್ವಲ್ ಹೇಗಾದರೂ ಮಾಡಿ ಚೇತನ್​​ಗೆ ಹೊಡೆಯಬೇಕು ಎಂದು ಹೇಳಿಕೊಂಡಿದ್ದ. ಆ ನಂತರ ಚೇತನ್ ಅವರು ಪ್ರಜ್ವಲ್ ಸಹೋದರಿ ಮನೆ ಬಿಟ್ಟು ಪರಾರಿ ಆಗಿದ್ದರು.

ಚೇತನ್​​​​ನನ್ನು ಕರೆದುಕೊಂಡು ಬಂದರೆ ಹಣ ಕೊಡುವುದಾಗಿ ಅವನ ಸ್ನೇಹಿತ ನಿಖಿಲ್​ಗೆ ಪ್ರಜ್ವಲ್​ ಹೇಳಿದ್ದಾನೆ. ಈ ಒಪ್ಪಂದದಕ್ಕೆ ಕಟ್ಟುಬಿದ್ದು ನಿಖಿಲ್​​​ ಎಂಬಾತ ಚೇತನ್​ನನ್ನು ಕ್ಯಾಮರಾ ಕೊಡುವುದಾಗಿ ಬೆಂಗಳೂರಿನ ನಾಗರಬಾವಿಯ ಬಿಬಿಎ ಕಾಂಪ್ಲೆಕ್ಸ್ ಬಳಿ ಕರೆ ತರುತ್ತಾನೆ.

ಅಲ್ಲಿಂದ ಮಿಥುನ್ ಕಾರಿನಲ್ಲಿ ಚೇತನ್​​​ನನ್ನ ದೊಡ್ಡಬಳ್ಳಾಪುರ ತಾಲೂಕಿನ ಹೊನ್ನಘಟ್ಟದ ಕೆರೆಯ ಬಳಿಗೆ ಕರೆದೊಯ್ದಿದ್ದಾರೆ. ನಂತರ ದೊಣ್ಣೆಗಳಿಂದ ಹೊಡೆದು ಬಟ್ಟೆಯಿಂದ ಚೇತನ್ ಕುತ್ತಿಗೆ ಬಿಗಿದು ಹತ್ಯೆ ಮಾಡಿ, ಶವವನ್ನ ಪೊದೆಯೊಳಗೆ ಎಸೆದು ಪರಾರಿಯಾಗಿದ್ದಾರೆ.

ಪ್ರಜ್ವಲ್​ ಕಾಣೆಯಾದ ಪ್ರಕರಣ ದಾಖಲಿಸಿಕೊಂಡ ದೊಡ್ಡಬೆಳವಂಗಲ ಪೊಲೀಸರು ಹುಡುಕಾಟ ಶುರು ಮಾಡಿದ್ದರು. ನಂತರ ಪ್ರಜ್ವಲ್​​ ಶವವನ್ನು ದೊಡ್ಡಬಳ್ಳಾಪುರ ಪೊಲೀಸರು ಪರಿಶೀಲಿಸಿದಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಪ್ರಕರಣ ದಾಕಲಿಸಿಕೊಂಡ ಪೊಲೀಸರು ಆರೋಪಿಗಳಾದ ಹೇಮಂತ್, ತಿಮ್ಮರಾಜು, ನವೀನ, ಸಂಜಯ್, ನಿಕಿಲ್, ವಾಸೀಫ್ ಮತ್ತು ಪ್ರವೀಣ್ ಅವರನ್ನು ಬಂಧಿಸಿದ್ದಾರೆ. ಪರಾರಿ ಆಗಿರುವ ಪ್ರಜ್ವಲ್, ಮಿಥುನ್, ಗಣೇಶ, ನಂದನ್, ಪವನ್ ಮತ್ತು ಜೀಷಾನ್ ಪತ್ತೆಗೆ ತಂಡ ರಚಿಸಿದ್ದಾರೆ.

ABOUT THE AUTHOR

...view details