ಬೆಂಗಳೂರು: 20ಕ್ಕೂ ಹೆಚ್ಚು ಬಾರಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪ್ರಕರಣ ಬೆಂಗಳೂರಿನ ಕೆ ಪಿ ಅಗ್ರಹಾರದಲ್ಲಿ ಬೆಳನಕಿಗೆ ಬಂದಿದೆ. ಅಪರಿಚಿತ ಆರು ಜನರಿಂದ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ. ಕೊಲೆಯಾದ ವ್ಯಕ್ತಿಯನ್ನು ಬಾದಾಮಿ ಮೂಲದ ಬಾಳಪ್ಪ ಜಮಖಂಡಿ ಎಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ ಈ ಕೊಲೆ ನಡೆದಿದ್ದು, ಪೊಲೀಸರ ತನಿಖೆ ವೇಳೆ ಸಿಕ್ಕ ಮೊಬೈಲ್ನಿಂದ ಮೃತರ ಹೆಸರು ತಿಳಿದು ಬಂದಿದೆ. ಬಾಳಪ್ಪ ಜಮಖಂಡಿ ಕೆ ಪಿ ಅಗ್ರಹಾರದ 5ನೇ ಕ್ರಾಸ್ ಬಳಿಯ ಮೆಡಿಕಲ್ಸ್ನಲ್ಲಿ ಮೊಬೈಲ್ಅನ್ನು ಚಾರ್ಜ್ಗೆ ಹಾಕಿದ್ದರು. ಚಾರ್ಜ್ಗೆ ಹಾಕುವ ವೇಳೆ ಬಾಳಪ್ಪ ಅವರನ್ನು ಆರು ಜನ ಬಂದು ಭೇಟಿಯಾಗಿದ್ದಾರೆ. ಅವರಲ್ಲಿ ಮಾತನಾಡಿ ಬರುವುದಾಗಿ ಹೇಳಿ ಮೊಬೈಲ್ ಬಿಟ್ಟು ಬಾಳಪ್ಪ ಹೋಗಿದ್ದಾರೆ.
ಮಹಿಳೆಯರು ಸೇರಿ ಆರು ಮಂದಿಯಿಂದ ಕಲ್ಲಿನಿಂದ ಜಜ್ಜಿ ಯುವಕನ ಕೊಲೆ ಬಾಳಪ್ಪ ಮತ್ತು ಆರು ಜನರ ನಡುವೆ ಸ್ವಲ್ಪ ಹೊತ್ತಿನಲ್ಲಿ ಗಲಾಟೆ ಆರಂಭವಾಗಿದೆ. ಆರು ಜನರಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಪುರುಷರು ಇದ್ದರು ಎಂದು ತಿಳಿದು ಬಂದಿದೆ. ಗಲಾಟೆ ವಿಕೋಪಕ್ಕೆ ತಿರುಗಿದೆ. ಅಲ್ಲೇ ಇದ್ದ ಕಲ್ಲಿನಿಂದ ಬಾಳಪ್ಪ ಅವರನ್ನು ಹೊಡೆದು ಕೊಲೆ ಮಾಡಿದ್ದಾರೆ.
ಕೊಲೆಗೆ ಬಾಳಪ್ಪನಿಗೆ ಇದ್ದ ಮಹಿಳೆ ಜೊತೆಗಿನ ಸಂಗ ಕಾರಣ ಎಂದು ಹೇಳಲಾಗ್ತಿದೆ. ಕೊಲೆ ಆರೋಪಿಗಳು ಬಾದಾಮಿ ಮೂಲದವರು ಎಂದು ಬೆಳಕಿಗೆ ಬಂದಿದೆ. ಆರೋಪಿಗಳಲ್ಲಿ ಓರ್ವ ಕೆ ಪಿ ಅಗ್ರಹಾರದಲ್ಲಿ ಸೆಕ್ಯುರಿಟಿಯಾಗಿದ್ದು, ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ಉಳಿದ ಐದು ಜನರ ಬಂಧ ಬಲೆ ಬೀಸಿದ್ದಾರೆ.
ಇದನ್ನೂ ಓದಿ:ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ: ಡೆತ್‌ನೋಟ್‌ನಲ್ಲಿ ಕಲಿಕೆಯ ಒತ್ತಡ ಉಲ್ಲೇಖ