ಬೆಂಗಳೂರು: ಖರೀದಿಸಿದ ಪ್ಲಾಟ್ಗೆ ಹಣ ಕೊಡದೆ ಸತಾಯಿಸಿದ ಎಂಬ ಕಾರಣಕ್ಕೆ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತೈ ಮಾಡಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾರ್ತಿಕ್ (42) ಕೊಲೆಯಾದ ವ್ಯಕ್ತಿ. ಪರಿಚಿತನಾಗಿದ್ದ ಮೋಹನ್ ಎಂಬಾತ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಾಗಿ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಪರಿಚಿತನಾಗಿದ್ದ ಮೋಹನ್, ಕಾರ್ತಿಕ್ ಜೊತೆ ಸೇರಿ ಅಪಾರ್ಟ್ಮೆಂಟ್ ಜಾಯಿಂಟ್ ವೆಂಚರ್ನಲ್ಲಿ ನಿರ್ಮಾಣ ಮಾಡಿದ್ದ. ಅಲ್ಲದೇ ಅಪಾರ್ಟ್ಮೆಂಟ್ನಲ್ಲಿ ಎರಡು ಫ್ಲಾಟ್ ಕಾರ್ತಿಕ್ ಖರೀದಿ ಮಾಡಿದ್ದ. ಆದರೆ, ಒಂದು ಪ್ಲ್ಯಾಟ್ಗೆ ಹಣ ನೀಡಿ ಮತ್ತೊಂದು ಫ್ಲಾಟ್ಗೆ ಹಣ ನೀಡದೇ ಸತಾಯಿಸುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಆಗಾಗ ಗಲಾಟೆ ಕೂಡ ನಡೆದಿತ್ತು. ಅಷ್ಟೇ ಅಲ್ಲ ಕಾರ್ತಿಕ್, ಮೋಹನ್ ಮಾಡಿದ ಪ್ರತಿ ಕೆಲಸಕ್ಕೂ ಅಡ್ಡಿಪಡಿಸುತ್ತಿದ್ದ. ಇದರಿಂದ ರೋಸಿ ಹೋಗಿದ್ದ ಮೋಹನ್, ಕಾರ್ತಿಕ್ ಕೊಲೆ ಮಾಡಲು ನಿರ್ಧರಿಸಿದ್ದ ಎನ್ನಲಾಗಿದೆ.