ಕರ್ನಾಟಕ

karnataka

ETV Bharat / state

ಬೆಂಗಳೂರು ಪೊಲೀಸ್ ಠಾಣೆ ಬಳಿ ವ್ಯಕ್ತಿಯ ಹತ್ಯೆ... ಗಣೇಶೋತ್ಸವ ಜಗಳ ಕೊಲೆಯಲ್ಲಿ ಅಂತ್ಯ! - ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ

ಗಣೇಶೋತ್ಸವದಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮುರುಳಿ ಎಂಬುವವರ ತಂಡದಿಂದ ಛಲಪತಿ ಎಂಬುವವರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದೆ ಎಂದು ಪ್ರಕರಣ ದಾಖಲಾಗಿದೆ.

ಕೊಲೆಯಾಗಿರುವ ಛಲಪತಿ

By

Published : Sep 15, 2019, 12:21 PM IST

ಬೆಂಗಳೂರು:ಗಣೇಶೋತ್ಸವದಲ್ಲಿ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ಸಮೀಪದಲ್ಲೇಶುಕ್ರವಾರ ಮುರುಳಿ ಎಂಬುವವರ ತಂಡವು ಛಲಪತಿ ಎಂಬುವವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದೆ ಎಂದು ತಿಳಿದುಬಂದಿದೆ.

ಮುರುಳಿ ಎಂಬಾತ ಇಂಜಿನಿಯರಿಂಗ್​​ ವರ್ಕ್ಸ್​​​ ಶಾಪ್​ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಇವರ ಕೈಕೆಳಗೆ ಇಬ್ಬರು ಕೆಲಸ ಮಾಡುತ್ತಿದ್ದರು. ಇನ್ನು ಶುಕ್ರವಾರ ಬೆಳಗ್ಗೆ 10ರ ಸುಮಾರಿಗೆ ಮುರುಳಿ ಗ್ಯಾಂಗ್​ ಛಲಪತಿ ಮೇಲೆ ಅಟ್ಯಾಕ್​ ಮಾಡಿ, ಮನಸೋ ಇಚ್ಛೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ನಂತರ ಛಲಪತಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದರೂ ಸಾವನ್ನಪ್ಪಿದ್ದಾನೆ.

ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ, ಕೊಲೆಯಲ್ಲಿ ಅಂತ್ಯ...!

ಏನಿದು ಪ್ರಕರಣ...?

ಕೆಲ ದಿನಗಳ ಹಿಂದೆ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಛಲಪತಿ ಹಾಗೂ ಮುರುಳಿ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದು ಬಡಿದಾಡಿಕೊಂಡಿದ್ದರು. ತನ್ನ ತಂದೆಯನ್ನು ಏಕವಚನದಲ್ಲಿ ನಿಂದಿಸಿದ್ದ ಎನ್ನುವ ಕಾರಣಕ್ಕಾಗಿ ಮುರಳಿ ಹಾಗೂ ಛಲಪತಿ ನಡುವೆ ಗಲಾಟೆ ನಡೆದಿತ್ತು.

ಈ ಬಗ್ಗೆ ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿ ರಾಜಿ ಸಂಧಾನ ಕೂಡಾ ಆಗಿತ್ತು, ಆದರೇ ಇದೇ ವಿಚಾರವಾಗಿ ಎಲ್ಲರ ಮುಂದೆ ಮಾನ ಮರ್ಯಾದೆ ತೆಗೆದ ಎಂಬ ಕಾರಣಕ್ಕಾಗಿ ಮುರಳಿ ಕತ್ತಿ ಮಸೆಯುತ್ತಿದ್ದ ಎನ್ನಲಾಗಿದೆ. ತನ್ನ ಸಹಚರರೊಂದಿಗೆ ಛಲಪತಿ ಕೆಲಸ ಮಾಡುತ್ತಿದ್ದಾಗ ಮುರುಳಿ ಬಂದು ಹಲ್ಲೆ ಮಾಡಿ ಕೊಲೆ ಗೈದಿದ್ದಾನೆ. ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details