ಬೆಂಗಳೂರು: ನಗರದಲ್ಲಿ ನಿನ್ನೆ ರಾತ್ರಿ ನಡೆದ ಗಲಾಟೆ ಅತಿರೇಕಕ್ಕೆ ತಿರುಗಿ ವ್ಯಕ್ತಿವೋರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗಂಗೋಡನಹಳ್ಳಿ ಮಾರಮ್ಮನ ದೇವಸ್ಥಾನ ಬಳಿ ರಾತ್ರಿ 12 ಗಂಟೆಯ ವೇಳೆ ಒಂದೇ ಏರಿಯಾದ 2-3 ಜನರ ನಡುವೆ ಗಲಾಟೆಯಾಗಿದೆ. ನಂತರ ಗಲಾಟೆ ಮಿತಿಮೀರಿದ್ದು, ಎದುರಾಳಿಗಳು ಗಲಾಟೆಯಲ್ಲಿ ಸಾಹಿಲ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ. ಗಾಯಾಳು ಸಾಹಿಲ್ನನ್ನು ಚಿಕಿತ್ಸೆಗೆಂದು ಕಿಮ್ಸ್ ಅಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.