ಕರ್ನಾಟಕ

karnataka

ETV Bharat / state

ಆಫ್ರಿಕನ್ ಫುಡ್ ಮೀಟ್​​ನಲ್ಲಿ ಗಲಾಟೆ... ಬೆಂಗಳೂರಲ್ಲಿ ನೈಜೀರಿಯನ್ ಪ್ರಜೆ ಹತ್ಯೆ - ಬೆಂಗಳೂರಿನಲ್ಲಿ ನೈಜೀರಿಯಾ ಪ್ರಜೆ ಕೊಲೆ

ಆಫ್ರಿಕನ್ ಫುಡ್ ಮೀಟ್​ನಲ್ಲಿ ಭೇಟಿಯಾಗಿದ್ದ ನೈಜೀರಿಯಾ ಪ್ರಜೆಗಳಿಬ್ಬರು ಕ್ಷುಲ್ಲಕ ಕಾರಣಕ್ಕೆ ಕಿತ್ತಾಡಿಕೊಂಡು ಓರ್ವ ಮತ್ತೋರ್ವನನ್ನು ಬರ್ಬರವಾಗಿ ಕೊಂದಿದ್ದಾನೆ. ಬೆಂಗಳೂರಿನಲ್ಲಿ ಈ ಪ್ರಕರಣ ನಡೆದಿದೆ.

ಆಫ್ರಿಕನ್ ಫುಡ್ ಮೀಟ್ ನಲ್ಲಿ ಕೊಲೆ

By

Published : Nov 3, 2019, 4:42 PM IST

ಬೆಂಗಳೂರು:ಕ್ಷುಲ್ಲಕ ಕಾರಣಕ್ಕೆನೈಜೀರಿಯಾ ಪ್ರಜೆಗಳು ಕಿತ್ತಾಡಿಕೊಂಡು ಚಾಕುವಿನಿಂದ ಇರಿದು ಸ್ನೇಹಿತನನ್ನೇ ಹತ್ಯೆಗೈದಿರುವ ಘಟನೆ ಹೆಣ್ಣೂರಿನ ಜಾನಕಿರಾಮ ಲೇಔಟ್ ನಲ್ಲಿ ಶನಿವಾರ ರಾತ್ರಿ ನಡೆದಿದೆ.

ಆಫ್ರಿಕನ್ ಫುಡ್ ಮೀಟ್ ನಲ್ಲಿ ಗಲಾಟೆ: ಗಾಂಜಾ ಮತ್ತಲ್ಲಿ ನೈಜೀರಿಯನ್ ಪ್ರಜೆ ಹತ್ಯೆ

ಮೊರೋಡೆ (29) ಮೃತ ವ್ಯಕ್ತಿ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ನೈಜೀರಿಯಾ ಮೂಲದ ಪ್ರಜೆಗಳೆಲ್ಲ ಸೇರಿ ಹೆಣ್ಣೂರು ಬಳಿಯ ಆಫ್ರಿಕನ್ ಫುಡ್ ಮೀಟ್ ನಲ್ಲಿ ಭೇಟಿಯಾಗಿದ್ದರು. ಈ ವೇಳೆ ಮನೆಯ ಕಿಚನ್ ನಲ್ಲಿ ಸ್ಯಾಮುಯೆಲ್ ಇಟ್ಟಿದ್ದ ಟಿಫನ್​ ಬಾಕ್ಸ್​ಅನ್ನು ತೆಗೆಯುವಂತೆ ಹೇಳಿ ಮೊರೋಡೆ ಎಲ್ಲರ ಮುಂದೆ ಸ್ಯಾಮುಯೆಲ್ ಗೆ ಕಪಾಳಮೋಕ್ಷ ಮಾಡಿದ್ದಾನೆ. ನಂತರ ಫುಡ್ ಮೀಟ್ ನಲ್ಲಿ ಸೇರಿದ್ದ ಗೆಳೆಯರು ಜಗಳ ಬಿಡಿಸಿದ್ದರು.

ಇನ್ನು ಇಷ್ಟಕ್ಕೆ ಸುಮ್ಮನಾಗದ ಸ್ಯಾಮ್ಯುಯೆಲ್ ಜಕ್ಕೂರಿನ ತನ್ನ ಮನೆಯಿಂದ ಚಾಕು ತಂದು ಬೆಳಗಿನ ಜಾವ ಮೊರೊಡೆಗೆ ಇರಿದು ಕೊಂದಿದ್ದಾನೆ.‌ ಸದ್ಯ ಘಟನೆ ಸಂಬಂಧ ಹೆಣ್ಣೂರು ಠಾಣೆಯಲ್ಲಿ ಕೊಲೆಪ್ರಕರಣ ದಾಖಲಾಗಿದೆ. ಕೊಲೆ ನಡೆದ ಕೆಲ ಘಂಟೆಗಳಲ್ಲೇ ಆರೋಪಿ ಸ್ಯಾಮ್ಯುಯೆಲ್​ಅನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಹೆಣ್ಣೂರು, ಕಲ್ಯಾಣ್ ನಗರ ಬಾಣಸವಾಡಿ ಸುತ್ತಮುತ್ತ ಸಂಜೆಯಾದ್ರೆ ನೈಜೀರಿಯನ್ ಪ್ರಜೆಗಳ ಹಾವಳಿ ಹೆಚ್ಚಾಗ್ತಿದೆ. ರಾತ್ರಿಯಿಡಿ ಗಾಂಜಾ ಸೇವನೆ ಮಾಡಿ ಓಡಾಡೊದು.‌ ಅನೈತಿಕ ಚಟುವಟಿಕೆಗಳಲ್ಲಿ‌ ಭಾಗಿಯಾಗೋದು, ಕುಡಿದು, ಗಾಂಜಾ ಮತ್ತಲ್ಲಿ ಸ್ಥಳೀಯರಿಗೆ ಅವಾಜ್ ಹಾಕೋದು ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ.

ABOUT THE AUTHOR

...view details