ಬೆಂಗಳೂರು: ಕೇವಲ 500 ರೂಪಾಯಿ ಹಾಗೂ ಬೇಸಿಕ್ ಮೊಬೈಲ್ ಫೋನಿಗಾಗಿ ರಸ್ತೆ ಬದಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದಿದ್ದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಕೇವಲ 500 ರೂಪಾಯಿಗೆ ಕೊಲೆ, ಆರೋಪಿಯ ಬಂಧನ - ಬೀದಿಬದಿಯಲ್ಲಿರುವವರ ಹತ್ತಿರ ಕಳ್ಳತನ ಮಾಡುತ್ತಿದ್ದ ಆರೋಪಿ
ಮದ್ಯ ಸೇವಿಸಿ ಬೀದಿ ಬದಿ ಮಲಗಿರುವವರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿ, ಮಲಗಿದ್ದವರ ಜೇಬಿನಿಂದ ಹಣ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದ.
ಕೇವಲ ₹500 ಗೆ ಕೊಲೆ ಮಾಡಿದ್ದ ಆರೋಪಿಯ ಬಂಧನ
ಬಂಧಿತನನ್ನು ಭದ್ರಾವತಿ ಮೂಲದ ಸಭಾಸ್ಟಿ ಎಂದು ಗುರುತಿಸಲಾಗಿದೆ. ಕುಡಿದು ಬೀದಿ ಬದಿ ಮಲಗಿರುವವರನ್ನು ಟಾರ್ಗೆಟ್ ಮಾಡುತ್ತಿದ್ದ ಈತ, ಮಲಗಿದ್ದವರ ಜೇಬಿನಿಂದ ಹಣ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದನಂತೆ.
ಅದೇ ರೀತಿ ಫೆಬ್ರವರಿ 24ರ ರಾತ್ರಿ ಕಾಮಾಕ್ಷಿಪಾಳ್ಯ ಬಾರ್ ಮುಂದೆ ಮಲಗಿದ್ದ ಸತೀಶ್ ಎಂಬಾತನ ಜೇಬಿನಲ್ಲಿದ್ದ ಐನೂರು ರೂಪಾಯಿ ಹಾಗೂ ಮೊಬೈಲ್ ಕಳ್ಳತನ ಮಾಡುವಾಗ ಸತೀಶ್ ಎಚ್ಚರಗೊಂಡಿದ್ದ. ಕಳ್ಳತನಕ್ಕೆ ವಿರೋಧ ವ್ಯಕ್ತಪಡಿಸಿದ ಎಂಬ ಕಾರಣಕ್ಕೆ ಆರೋಪಿ ಸಿಮೆಂಟ್ ಕಲ್ಲನ್ನು ಸತೀಶ್ ತಲೆ ಮೇಲೆ ಎತ್ತಿ ಹಾಕಿ ಕೊಲೆಗೈದಿದ್ದ.
TAGGED:
Bangalore murder case