ಬೆಂಗಳೂರು:ವೈಯಕ್ತಿಕ ದ್ವೇಷದ ಹಿನ್ನೆಲೆ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷೆ ಮುನಿರತ್ನಮ್ಮರ ಪತಿ ನಾರಾಯಣಪ್ಪ ಅವರ ಮೇಲೆ ಮತ್ತೋರ್ವ ವಿಕಲಚೇತನ ಚಾಕುವಿನಿಂದ ಇರಿಯಲು ಮನೆಗೆ ನುಗ್ಗಿದ ಪ್ರಕರಣ ಆನೇಕಲ್ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ನಡೆದಿದೆ.
ಮಾಯಸಂದ್ರ ಗ್ರಾಮದ ಗರುಡ ಮಂಜು ಕೊಲೆ ಮಾಡಲು ಮನೆಗೆ ನುಗ್ಗಿದ ಆರೋಪಿಯಾಗಿದ್ದಾರೆ. ಮಾಯಸಂದ್ರ-ಹಳೇಹಳ್ಳಿ ಮುಖ್ಯರಸ್ತೆ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ 9:00 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಬಂದು ಗರುಡ ಮಂಜು ನಾರಾಯಣಪ್ಪ ಅವರ ಮನೆಗೆ ನುಗ್ಗಿ ಚಾಕುವಿನಿಂದ ಕೊಲೆಮಾಡಲು ಯತ್ನಿಸಿದ್ದಾರೆ. ಕೊಲೆ ಪ್ರಯತ್ನ ಮಾಡುತ್ತಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.