ಬೆಂಗಳೂರು:ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವ ನಡುರಸ್ತೆಯಲ್ಲೇ ಕೊಲೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಬೈಕ್ಗೆ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ! - ಬೆಂಗಳೂರು ಲೆಟೆಸ್ಟ್ ನ್ಯೂಸ್
ನಿನ್ನೆ ರಾತ್ರಿ ಯುವಕ ಅರುಣ್ ವಿಜ್ಞಾನ ನಗರಕ್ಕೆ ಬೈಕ್ನಲ್ಲಿ ಹೋಗುವಾಗ ಮತ್ತೊಂದು ಬೈಕ್ಗೆ ತಾಗಿದೆ. ಎರಡು ಬೈಕ್ ಸವಾರರ ನಡುವೆ ಜಗಳ ನಡೆದು ಕೊನೆಗೆ ನಡು ರಸ್ತೆಯಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಎದುರಾಳಿಗಳು ಅರುಣ್ನನ್ನು ಕೊಲೆ ಮಾಡಿದ್ದಾರೆ.
ಅರುಣ್(24 ವರ್ಷ) ಕೊಲೆಗೀಡಾಗಿರುವ ಯುವಕ. ನಿನ್ನೆ ರಾತ್ರಿ ಅರುಣ್ ವಿಜ್ಞಾನ ನಗರಕ್ಕೆ ಬೈಕ್ನಲ್ಲಿ ಹೋಗುವಾಗ ಮತ್ತೊಂದು ಬೈಕ್ಗೆ ಟಚ್ ಆಗಿದೆ. ಎರಡು ಬೈಕ್ ಸವಾರರ ನಡುವೆ ಜಗಳ ನಡೆದು ಕೊನೆಗೆ ನಡು ರಸ್ತೆಯಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಎದುರಾಳಿಗಳು ಅರುಣ್ನನ್ನು ಕೊಲೆ ಮಾಡಿದ್ದಾರೆ.
ಯುವಕ ಅರುಣ್ ಏರ್ಪೋರ್ಟ್ ಕಾಫಿ ಡೇನಲ್ಲಿ ಕೆಲಸ ಮಾಡಿಕೊಂಡಿದ್ದ. ಲಾಕ್ಡೌನ್ ಸಮಯದಲ್ಲಿ ಕಾಫಿ ಡೇ ಬಂದ್ ಆದ ಕಾರಣ, ಉದ್ಯೋಗವಿಲ್ಲದೆ ಮನೆಯಲ್ಲಿದ್ದ. ನಿನ್ನೆ ತಡರಾತ್ರಿ ಕೆಲಸದ ಸಂಬಂಧ ಹೊರಗಡೆ ತೆರಳಿದಾಗ ಈ ಘಟನೆ ನಡೆದಿದೆ. ಈ ಸಂಬಂಧ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.