ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಮಲಗುವ ವಿಚಾರಕ್ಕೆ ಗಲಾಟೆ.. ವ್ಯಕ್ತಿ ಕೊಲೆಗೈದಿದ್ದ ಆರೋಪಿ ಬಂಧನ - ಬೆಂಗಳೂರಲ್ಲಿ ಮಲಗುವ ವಿಚಾರಕ್ಕೆ ಗಲಾಟೆ

ಯಶವಂತಪುರದ ಪೈಪ್ ಲೈನ್‌ರಸ್ತೆಯಲ್ಲಿರುವ ವರಸಿದ್ಧಿ ವಿನಾಯಕ ದೇವಸ್ಥಾನ ಹೊರಾಂಗಣದಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ಆರೋಪಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

Murder accused arrested in Bengaluru
ವ್ಯಕ್ತಿಗೆ ಥಳಿಸಿ ಹತ್ಯೆ

By

Published : Sep 19, 2022, 12:52 PM IST

Updated : Sep 19, 2022, 2:28 PM IST

ಬೆಂಗಳೂರು:ದೇವಸ್ಥಾನವೊಂದರ ಬದಿಯಲ್ಲಿ ಮಲಗುವ ವಿಚಾರಕ್ಕೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿತ್ತು. ಪ್ರಕರಣ ಸಂಬಂಧ ಹತ್ಯೆ ಮಾಡಿದ ಆರೋಪಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಮಲಗುವ ವಿಚಾರಕ್ಕೆ ಗಲಾಟೆ.. ವ್ಯಕ್ತಿಯ ಹತ್ಯೆ- ಸಿಸಿಟಿವಿ ದೃಶ್ಯ

ಪ್ರಕಾಶ್ ಬಂಧಿತ ಆರೋಪಿ. ಶಂಕರಪ್ಪ ಕೊಲೆಯಾದ ವ್ಯಕ್ತಿ. ಯಶವಂತಪುರದ ಪೈಪ್ ಲೈನ್‌ರಸ್ತೆಯಲ್ಲಿರುವ ವರಸಿದ್ಧಿ ವಿನಾಯಕ ದೇವಸ್ಥಾನ ಹೊರಾಂಗಣದಲ್ಲಿ ಪ್ರಕಾಶ್ ಪ್ರತಿದಿನ ಮಲಗುತ್ತಿದ್ದ. ಸೆ.12ರಂದು ರಾತ್ರಿ ಆತ ಮಲಗುವ ಜಾಗದಲ್ಲಿ ಶಂಕರಪ್ಪ ಮಲಗಿಕೊಂಡಿದ್ದ‌.‌

ಇದನ್ನು ಕಂಡು ಸಿಟ್ಟಿಗೆದ್ದ ಪ್ರಕಾಶ್ ದೊಣ್ಣೆಯಿಂದ ಹೊಡೆದು ಏಳಿಸಿದ್ದಾನೆ. ಬಳಿಕ ಹೊಟ್ಟೆ ಹಾಗೂ ಮುಖಕ್ಕೆ ಹೊಡೆದು ಕಾಲಿನಿಂದ ತುಳಿದಿದ್ದಾನೆ. ಇದರಿಂದ ‌ಗಂಭೀರವಾಗಿ ಗಾಯಗೊಂಡ ಶಂಕರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದ. ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಯಶವಂತಪುರ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಕಾರಿನಲ್ಲಿ ಬಂದು ಹೂಕುಂಡ ಕದ್ದ ಜೋಡಿ: ಸಿಸಿಟಿವಿಯಲ್ಲಿ ಕೃತ್ಯ ಸೆರೆ

Last Updated : Sep 19, 2022, 2:28 PM IST

ABOUT THE AUTHOR

...view details