ಬೆಂಗಳೂರು:ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ರನ್ನು ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಆಯುಕ್ತರನ್ನಾಗಿ ಮರು ವರ್ಗಾವಣೆ ಮಾಡಲಾಗಿದೆ.
ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಆಯುಕ್ತರಾಗಿ ಮುನೀಶ್ ಮೌದ್ಗಿಲ್ ಮರು ವರ್ಗಾವಣೆ ಸೆ.11ಕ್ಕೆ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ರನ್ನು ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಆಯುಕ್ತ ಸ್ಥಾನದಿಂದ ಮೈಸೂರಿನ ಆಡಳಿತ ಸುಧಾರಣೆ ಹಾಗೂ ತರಬೇತಿ ಸಂಸ್ಥೆಯ ಮಹಾನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿತ್ತು. ಇದೀಗ ಸರ್ಕಾರ ಮೌದ್ಗಿಲ್ರನ್ನು ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಆಯುಕ್ತರನ್ನಾಗಿ ಮರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಮೌದ್ಗಿಲ್ಗೆ ಮೈತ್ರಿ ಸರ್ಕಾರ ಆಡಳಿತದಲ್ಲಿ ಸಾಲ ಮನ್ನಾ ಅನುಷ್ಠಾನದ ಹೊಣೆಗಾರಿಕೆ ನೀಡಲಾಗಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ ಸಿಎಂ ಯಡಿಯೂರಪ್ಪ ಅವರು ಮೌದ್ಗಿಲ್ರನ್ನು ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಆಯುಕ್ತ ಸ್ಥಾನದಿಂದ ಎತ್ತಂಗಡಿ ಮಾಡಿದ್ದರು.
ಆದರೆ, ಇದೀಗ ವರ್ಗಾವಣೆ ಮಾಡಿ ಎಂಟು ದಿನಗಳಲ್ಲೇ ಮೌದ್ಗಿಲ್ರನ್ನು ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಆಯುಕ್ತ ಸ್ಥಾನಕ್ಕೆ ಮರು ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವುದು ಅಚ್ಚರಿ ಮೂಡಿಸಿದೆ.
ಮುನೀಶ್ ಮೌದ್ಗಿಲ್ ಅವರು ಕಳೆದ ವಾರವಷ್ಟೇ ಬೆಂಗಳೂರು ನಗರ ಜಿಲ್ಲಾ ಡಿಸಿಯಾಗಿದ್ದ ವಿ.ಶಂಕರ್ ಹಾಗೂ ಕೆಲ ಅಧಿಕಾರಿಗಳು ಆನೇಕಲ್‌ನ ಜಿಗಣಿಯಲ್ಲಿನ ಸುಮಾರು 19 ಎಕರೆ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಎಸಿಬಿಗೆ ದೂರನ್ನು ನೀಡಿದ್ದರು.