ಕರ್ನಾಟಕ

karnataka

ETV Bharat / state

ಬಹುಕೋಟಿ ಟಿಡಿಆರ್​​ ಹಗರಣ: ಮುಖ್ಯ ಆರೋಪಿ ಕೃಷ್ಣಾ ಲಾಲ್​ನನ್ನು ಬಿಬಿಎಂಪಿಗೆ ಕರೆತಂದ ಎಸಿಬಿ - Bangalore Latest TDR news

ಬಹುಕೋಟಿ ಟಿಡಿಆರ್ ಹಗರಣ ಪ್ರಕರಣದ ಮುಖ್ಯ ಆರೋಪಿ ಕೃಷ್ಣಾ ಲಾಲ್​ನನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಪ್ರಾಥಮಿಕ ಹಂತವಾಗಿ ಸದ್ಯ ಬಿಬಿಎಂಪಿ ಕೇಂದ್ರ ಕಚೇರಿಗೆ ಕರೆದೊಯ್ದು ಸ್ಥಳದ ಮಹಜರು ಮಾಡಿದ್ದಾರೆ.

ಆರೋಪಿ ಕೃಷ್ಣಾ ಲಾಲ್

By

Published : Nov 19, 2019, 4:11 PM IST

ಬೆಂಗಳೂರು:ಬಹುಕೋಟಿ ಟಿಡಿಆರ್ ಹಗರಣ ಪ್ರಕರಣದ ಮುಖ್ಯ ಆರೋಪಿ ಕೃಷ್ಣಾ ಲಾಲ್​ನನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಪ್ರಾಥಮಿಕ ಹಂತವಾಗಿ ಸದ್ಯ ಬಿಬಿಎಂಪಿ ಕೇಂದ್ರ ಕಚೇರಿಗೆ ಕರೆದೊಯ್ದು ಸ್ಥಳದ ಮಹಜರು ಮಾಡಿದ್ದಾರೆ.

ಆರೋಪಿ ಕೃಷ್ಣಾ ಲಾಲ್
ನೈಜ ಮಾಲೀಕತ್ವ ಮರೆಮಾಚಿ ಕಾನೂನು ಬಾಹಿರವಾಗಿ ಅತಿ ಹೆಚ್ಚು ಪ್ರಮಾಣದ ಟಿಡಿಆರ್ ವಿತರಣೆ ಮಾಡಿ ಆರೋಪಿ ಕೃಷ್ಣಲಾಲ್ ತಲೆಮರೆಸಿಕೊಂಡಿದ್ದ. ಸದ್ಯ ಪ್ರಕರಣ ಸಂಬಂಧ ಮಹತ್ವದ 57 ಕಡತಗಳು ಎಸಿಬಿ ಅಧಿಕಾರಿಗಳಿಗೆ ಬೇಕಾಗಿದ್ದು, ತನೀಖೆ ಮುಂದುವರೆಸಿದ್ದಾರೆ. ಈತ ಟಿಡಿಆರ್ ಹಕ್ಕು ವರ್ಗಾವಣೆ ಪ್ರಕ್ರಿಯೆಯಲ್ಲಿ ವಂಚನೆ ಎಸಗುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದ ಎನ್ನುವ ಆರೋಪವಿದೆ. ಬಿಬಿಎಂಪಿ ರಸ್ತೆಗಳ ವಿಸ್ತರಣೆಗೆ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ನಿಗದಿತ ಜಾಗಕ್ಕಿಂತ ಹೆಚ್ಚು ಟಿಡಿಆರ್ ಹಕ್ಕು ಕೊಡುವ ಮೂಲಕ ಮೋಸ ಮಾಡಿದ್ದಾನೆ ಎನ್ನಲಾಗಿದೆ.

ABOUT THE AUTHOR

...view details