ಕರ್ನಾಟಕ

karnataka

ETV Bharat / state

ಬಹುಕೋಟಿ ಟಿಡಿಆರ್ ಗೋಲ್‌ಮಾಲ್ ಕೇಸ್‌: ಆರೋಪಿ ಕೃಷ್ಣಲಾಲ್​​​ಗೆ ಬಂಧನ ಭೀತಿ - undefined

ಕೃಷ್ಣಲಾಲ್ ಸಲ್ಲಿಸಿದ್ದ ಮದ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ರದ್ದು‌ಮಾಡಿದೆ.

ಬಹುಕೋಟಿ ಟಿಡಿಆರ್ ಗೋಲ್ ಮಾಲ್ ಪ್ರಕರಣ

By

Published : May 29, 2019, 12:29 PM IST

ಬೆಂಗಳೂರು : ಬಹುಕೋಟಿ ಟಿಡಿಆರ್ ಗೋಲ್‌ಮಾಲ್ ಪ್ರಕರಣಕ್ಕೆ‌‌ ಸಂಬಂಧಿಸಿದಂತೆ ಪ್ರಮುಖ ಆರೋಪಿ ಎಇಇ ಕೃಷ್ಣಲಾಲ್​​​ಗೆ ಮತ್ತೆ ಬಂಧನದ ಭೀತಿ ಎದುರಾಗಿದೆ.

ಕೃಷ್ಣಲಾಲ್ ಸಲ್ಲಿಸಿದ್ದ ಮದ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ಟಿಡಿಆರ್ ಗೋಲ್‌ಮಾಲ್ ಕೇಸಲ್ಲಿ ಪ್ರಮುಖ ಆರೋಪಿಯಾಗಿರುವ ಕೃಷ್ಣಲಾಲ್ ಎಸಿಬಿ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಮದ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದರು.

ಆದರೆ ಹೆಚ್ಚಿನ ತನಿಖೆ ಸಲುವಾಗಿ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಎಸಿಬಿ, ನ್ಯಾಯಲಯಕ್ಕೆ ಅರ್ಜಿ ಹಾಕಿತ್ತು. ಈ ಅರ್ಜಿ ವಿಚಾರಣೆ ನಡೆಸಿ ನಿರೀಕ್ಷಣಾ ಜಾಮೀನು ರದ್ದುಗೊಳಿಸಿ ನ್ಯಾಯಾಲಯ‌ ಆದೇಶ ಹೊರಡಿಸಿದೆ. ಹಾಗಾಗಿ ಇದೀಗ ಕೃಷ್ಣಲಾಲ್‌ಗೆ ಮತ್ತೆ ಬಂಧನದ ಭೀತಿ ಎದುರಾಗಿದೆ. ಇದೇ ವೇಳೆ ಆರೋಪಿ ಇದುವರೆಗೂ ಎಸಿಬಿ ತನಿಖೆ ಹಾಗೂ ವಿಚಾರಣೆಗೆ ಹಾಜರಾಗದೇ ಕಣ್ಮರೆಯಾಗಿದ್ದಾರೆ.

ಬಹುಕೋಟಿ ಟಿಡಿಆರ್ ಗೋಲ್ ಮಾಲ್ ಪ್ರಕರಣ

ಏನಿದು ಪ್ರಕರಣ :

ಕಳೆದ ಏಪ್ರಿಲ್‌ನಲ್ಲಿ ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಟಿಡಿಆರ್ ನೀಡಿ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃಧಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ. ಎಂಜಿನಿಯರ್ ಕೃಷ್ಣಲಾಲ್ ಮನೆ, ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆಸಿದರು. ಈ ದಾಳಿ ನಡೆದ ನಂತರ ಹಲವಾರು ಮಂದಿ ಟಿಡಿಆರ್ ನಲ್ಲಿ ಶಾಮೀವಾಗಿರುವ ವಿಚಾರ ಬೆಳಕಿಗೆ ಬಂದಿದ್ದು, ಒಟ್ಟು 7 ಜನರ ಮೇಲೆ ದಾಳಿ ನಡೆಸಲಾಗಿತ್ತು. ಹಾಗೆಯೇ ಎಸಿಬಿ ಮೂಲಗಳ ಪ್ರಕಾರ, ಇದರಲ್ಲಿ ಬಿಬಿಎಂಪಿ, ಬಿಡಿಎ ಅಧಿಕಾರಿಗಳು ಭಾಗಿಯಾಗಿರುವ ಶಂಕೆಯಿದ್ದು,ತನಿಖೆ ಮುಂದುವರೆದಿದೆ.

For All Latest Updates

TAGGED:

ABOUT THE AUTHOR

...view details