ಬೆಂಗಳೂರು: ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿಗೆ ಎಂಟಿಬಿ ನಾಗರಾಜ್ ಆಗಮಿಸಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಚರ್ಚೆ ಬಳಿಕ ಯಾರ ಬಳಿಯು ಮಾತನಾಡದೆ ಎಂಟಿಬಿ ನಾಗರಾಜ್ ಹೊರಟರು.
ಸಿಎಂ ಬಿಎಸ್ವೈ ನಿವಾಸಕ್ಕೆ ಮತ್ತೆ ಎಂಟಿಬಿ ನಾಗರಾಜ್ ಭೇಟಿ - mtb nagraj visits to cm yadiyurappa residency
ಸಿಎಂ ಬಿಎಸ್ವೈ ನಿವಾಸಕ್ಕೆ ಮಾಜಿ ಶಾಸಕ ಎಂಟಿಬಿ ನಾಗರಾಜ್ ಭೇಟಿ ನೀಡಿದ್ದು, ಮುಖ್ಯಮಂತ್ರಿ ಭೇಟಿ ನಂತರ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡದೆ ತೆರಳಿದ್ದಾರೆ.
ಸಿಎಂ ಬಿಎಸ್ವೈ ನಿವಾಸಕ್ಕೆ ಎಂಟಿಬಿ ನಾಗರಾಜ್ ಭೇಟಿ
ಪಕ್ಷದಲ್ಲಿ ತಮ್ಮ ಮುಂದಿನ ಭವಿಷ್ಯ ಹಾಗೂ ಸಚಿವ ಸಂಪುಟ ವಿಸ್ತರಣೆ ವಿಳಂಬದಿಂದ ಕಂಗಾಲಾಗಿರುವ ಎಂಟಿಬಿ ನಾಗರಾಜ್, ಹಾಲಿ ಶಾಸಕರು ಗೆದ್ದು ಇಷ್ಟು ದಿನಗಳಾಗಿದ್ದರೂ ಇನ್ನೂ ಸಚಿವರಾಗಿಲ್ಲ. ಇನ್ನು ಸೋತವರ ಪಾಡೇನು ಎಂದು ಆತಂಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಮುಖ್ಯಮಂತ್ರಿ ಭೇಟಿ ನಂತರ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಎಂಟಿಬಿ ಹೊರಟು ಹೋಗಿದ್ದಾರೆ.