ಕರ್ನಾಟಕ

karnataka

ETV Bharat / state

ನಾನು ಯಾವ ಸಿಎಂಗೂ ಕಡಿಮೆ ಇಲ್ಲ: ಎಂಟಿಬಿ ನಾಗರಾಜ್​​​​ - ಎಂಟಿಬಿ ನಾಗರಾಜ್ ಇತ್ತೀಚಿನ ಸುದ್ದಿ

ಹೊಸಕೋಟೆ ಕ್ಷೇತ್ರದಲ್ಲಿ ಈಗಾಗಲೇ ಗೆದ್ದಿದ್ದೇನೆ. ನನ್ನನ್ನು ಮಂತ್ರಿ ಮಾಡಲಿ, ಮಾಡದೆ ಇರಲಿ ನಾನು ಯಾವ ಸಿಎಂಗೂ ಕಮ್ಮಿ ಇಲ್ಲ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್

By

Published : Nov 25, 2019, 8:42 PM IST

ಬೆಂಗಳೂರು:ನಾನು ಯಾವ ಸಿಎಂಗೇನು ಕಡಿಮೆ ಇಲ್ಲ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ.

ಹೊಸಕೋಟೆ ನಗರದಲ್ಲಿ ಚುನಾವಣಾ ಸಭೆ ನಡೆಸಿ ಮಾತನಾಡಿದ ಎಂಟಿಬಿ ನಾಗರಾಜ್, ನಾನು ಹೊಸಕೋಟೆ ಕ್ಷೇತ್ರದಲ್ಲಿ ಈಗಾಗಲೇ ಗೆದ್ದಿದ್ದೇನೆ. ನನ್ನ ಮಂತ್ರಿ ಮಾಡಲಿ, ಮಾಡದೇ ಇರಲಿ. ನಾನು ಯಾವ ಸಿಎಂಗೂ ಕಮ್ಮಿ ಇಲ್ಲ ಅಂತ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಎಂಟಿಬಿ ನಾಗರಾಜ್, ಬಿಜೆಪಿ ಅಭ್ಯರ್ಥಿ

ನನ್ನ ಹೊಸಕೋಟೆಗೆ ಕರೆದು ತಂದು ನಿಲ್ಲಿಸಿದ್ದು ಎಸ್.ಎಂ.ಕೃಷ್ಣ ಮಾತ್ರ. ಇಲ್ಲಿ ಕಾಂಗ್ರೆಸ್​​ನಿಂದ ನಿಂತು ಮುನೇಗೌಡರು ಮೂರು ಬಾರಿ ಸೋತಿದ್ದರು. ಅದಕ್ಕೆ ಗತಿ ಇಲ್ಲದೆ ಈ ಮಿನಿ ಬಿಹಾರ್​ನಲ್ಲಿ ತಂದು ಕಾಂಗ್ರೆಸ್​​ನವರು ನನ್ನನ್ನ ನಿಲ್ಲಿಸಿದರು ಎಂದು ಗುಡುಗಿದ್ರು. ಜೊತೆಗೆ ಈ ಭಾಗದಲ್ಲಿ ನನ್ನಿಂದಾಗಿ ಕಾಂಗ್ರೆಸ್​​ಗೆ ವರ್ಚಸ್ಸು ಹೆಚ್ಚಾಯಿತು. ಕಾಂಗ್ರೆಸ್​​​ನಿಂದ ನನಗೆ ಏನು ಸಿಕ್ಕಿಲ್ಲಾ ಅಂತಾ ಸಿದ್ದರಾಮಯ್ಯ ಮಾತುಗಳಿಗೆ ತಿರುಗೇಟು ನೀಡಿದ್ರು.

ಇನ್ನು ಶರತ್ ಬಚ್ಚೇಗೌಡಗೆ ಬುದ್ಧಿ ಭ್ರಮಣೆ ಆಗಿದೆ. ರಿಯಲ್ ಎಸ್ಟೇಟ್ ಸೈಟ್ ಮಾದರಿಯಲ್ಲಿ ಜನನಾಯಕರಿಗೆ ಬೆಲೆ ಕಟ್ಟುತ್ತಿದ್ದಾರೆ ಅಂತಾ ತಮ್ಮ ಮೇಲೆ ಶರತ್ ಮಾಡಿರುವ ಆರೋಪ ಸುಳ್ಳು. ನಾನು ಯಾರಿಗೂ ಯಾವ ಬೆಲೆಯನ್ನೂ ಕಟ್ಟಿಲ್ಲ. ಶರತ್ ಬಚ್ಚೇಗೌಡಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಬುದ್ಧಿ ಭ್ರಮಣೆಯಾಗಿದೆ. ಅದಕ್ಕೆ ಇಂತಹ ಹೇಳಿಕೆಗಳನ್ನ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ABOUT THE AUTHOR

...view details