ಕರ್ನಾಟಕ

karnataka

ETV Bharat / state

ನಾನು ಯಾರಿಗೂ ದುಡ್ಡು ಕೊಡುವ ಅವಶ್ಯಕತೆ ಇಲ್ಲ: ಎಂಟಿಬಿ ನಾಗರಾಜ್ - ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್

ಎಲ್ಲ ಸಮುದಾಯದ ಜನರೂ ನನ್ನ ಬೆಂಬಲಿಸುತ್ತಾರೆ. ನಾನು ಯಾರಿಗೂ ದುಡ್ಡುಕೊಡೋ ಅವಶ್ಯಕತೆ ಇಲ್ಲ. ಗೆಲುವು ನನ್ನದೇ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ವಿಶ್ವಾಸ ವ್ಯಕ್ತಪಡಿಸಿದರು.

MTB nagaraj statement in hosakote, ಎಂಟಿಬಿ ನಾಗರಾಜ್​ ಹೇಳಿಕೆ ಸುದ್ದಿ
ಎಂಟಿಬಿ ನಾಗರಾಜ್ ಹೇಳಿಕೆ

By

Published : Nov 26, 2019, 11:41 PM IST

ಬೆಂಗಳೂರು (ಹೊಸಕೋಟೆ) :ಎಲ್ಲ ಸಮುದಾಯವೂ ನನ್ನ ಬೆಂಬಲಿಸುತ್ತಾರೆ. ನಾನು ಯಾರಿಗೂ ದುಡ್ಡುಕೊಡೋ ಅವಶ್ಯಕತೆ ಇಲ್ಲ. ಗೆಲುವು ನನ್ನದೇ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ವಿಶ್ವಾಸ ವ್ಯಕ್ತಪಡಿಸಿದರು.

ಎಂಟಿಬಿ ನಾಗರಾಜ್ ಹೇಳಿಕೆ

ಹೊಸಕೋಟೆ ಉಪಚುನಾವಣೆ ಕಣ ದಿನದದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇಂದು ಹೊಸಕೋಟೆಯ ನಾಲ್ಕು ಹೋಬಳಿಯ ಪ್ರಮುಖರ ಸಭೆ ನಡೆಸಿ ಚುನಾವಣಾ ರಣತಂತ್ರಗಳನ್ನ ರೂಪಿಸಿದರು. ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಭಾಗವಹಿಸಿದ್ದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್, ಯಶಸ್ವಿಯಾಗಿ ಪ್ರಚಾರ ಸಭೆಗಳನ್ನು ಮಾಡುತ್ತಿದ್ದೇವೆ. ನಾಳೆ 11 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಬರಲಿದ್ದಾರೆ. ಶರತ್ ಬಚ್ಚೇಗೌಡ 120 ಕೋಟೆ ರೂ ಆಫರ್ ಕೊಟ್ಟಿರುವ ಬಗ್ಗೆ ಎಲ್ಲಿಯಾದ್ರೂ ಹೇಳಿದ್ರೆ ಸಾಬೀತು ಪಡಿಸಲಿ ಎಂದು ಸವಾಲ್ ಹಾಕಿದರು.

ಕೊಂಡುಕೊಳ್ಳುವುದಕ್ಕೆ ಇದು ಏನು ವ್ಯಾಪಾರನಾ? ಕೋಟಿ-ಕೋಟಿ ಕೊಡುವ ಪ್ರಮೇಯ ನನಗೆ ಏನಿದೆ? ದುಡ್ಡು ಕೊಟ್ಟು ಕೊಂಡುಕೊಳ್ಳುವುದಕ್ಕೆ ಕುರಿ, ಕೋಳಿ ವ್ಯಾಪಾರ ಅಲ್ಲ. ಮತದಾರರು ಎಲ್ಲವನ್ನೂ ನಿರ್ಧಾರಿಸುತ್ತಾರೆ ಎಂದು ಕಿಡಿಕಾರಿದರು.

ಅಲ್ಲದೆ ಸಿದ್ದರಾಮಯ್ಯ ಟೀಕೆ ಮಾಡುವ ವಿಚಾರದಲ್ಲಿ ಕುರುಬ ಸಮುದಾಯದ ಮತಗಳು ವಿಭಜನೆ ಆಗುವುದಿಲ್ಲ. ಎಲ್ಲ ಸಮುದಾಯಗಳು ನನ್ನನ್ನು ಬೆಂಬಲಿಸುತ್ತಾರೆ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details