ಕರ್ನಾಟಕ

karnataka

ETV Bharat / state

ಯಡಿಯೂರಪ್ಪ ಕೊಟ್ಟ ಆ ಭರವಸೆಗೆ ಎಂಟಿಬಿ ನಾಗರಾಜ್‌ ಫುಲ್‌ಖುಷ್‌..!

ಎಂಟಿಬಿ ನಾಗರಾಜ್ ಅವರ ಮನವೊಲಿಸಿದ ಸಿಎಂ ಬಿಎಸ್​ವೈ ಅವರು, ಸಚಿವ ಸ್ಥಾನದ ಬದಲು ಪಕ್ಷದಲ್ಲಿ ಗೌರವಯುತ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಎಂಟಿಬಿ ಸಿಟ್ಟು ಶಮನವಾಗಿದೆ ಎಂದು ಹೇಳಲಾಗ್ತಿದೆ.

MTB Nagaraj Statement about Cabinet expansion
ಅನರ್ಹ ಶಾಸಕ ಎಂಟಿಬಿ ನಾಗರಾಜ್

By

Published : Feb 3, 2020, 9:01 PM IST

ಬೆಂಗಳೂರು:ಉಪ ಚುನಾವಣೆಯಲ್ಲಿ ಸೋತ ಇಬ್ಬರು ಅನರ್ಹ ಶಾಸಕರು ಇದೀಗ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಮತ್ತು ಆಡಳಿತಾರೂಢ ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಟಿಬಿ ನಾಗರಾಜ್ ಅವರ ಮನವೊಲಿಸಿದ ಸಿಎಂ ಬಿಎಸ್​ವೈ ಅವರು, ಸಚಿವ ಸ್ಥಾನದ ಬದಲು ಪಕ್ಷದಲ್ಲಿ ಗೌರವಯುತ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಎಂಟಿಬಿ ನಾಗರಾಜ್ ಸಿಟ್ಟು ಶಮನವಾಗಿದೆ ಎಂದು ಹೇಳಲಾಗ್ತಿದೆ.

ಸಿಎಂ ಯಡಿಯೂರಪ್ಪ ಮಾಜಿ ಸಚಿವ ಎಂಟಿಬಿ ನಾಗರಾಜ್‌ಗೆ ಕೊಟ್ಟ ಆ ಭರವಸೆ ಏನು?

ಈ ಕುರಿತು ಮಾತನಾಡಿದ ಎಂಟಿಬಿ ನಾಗರಾಜ್, ನಿನ್ನೆ ಮುಖ್ಯಮಂತ್ರಿಯವರ ಜೊತೆ 35 ನಿಮಿಷಗಳ ಕಾಲ ಚರ್ಚೆ ಮಾಡಿದ್ದೇನೆ. ಸಂಪುಟ ವಿಸ್ತರಣೆ ಬಳಿಕ ಉನ್ನತ ಸ್ಥಾನಮಾನ ನೀಡಲಾಗುತ್ತೆ. ಕೆಲ ಕಾಲ ಕಾಯಿರಿ ಎಂದು ಭರವಸೆ ನೀಡಿದ್ದಾರೆ ಎಂದರು. ಮೇ ಅಥವಾ ಜೂನ್ ತಿಂಗಳಲ್ಲಿ ಏಳು ಎಂಎಲ್​​ಸಿ ಸ್ಥಾನಗಳು ತೆರವಾಗಲಿವೆ. ಆಗ ಸೋತ ನನಗೂ ಮತ್ತು ಹೆಚ್​. ವಿಶ್ವನಾಥ್ ಅವರಿಗೂ ಸ್ಥಾನ ನೀಡಿ ಮಂತ್ರಿ ಮಾಡೋದಾಗಿ ಸಿಎಂ ಭರವಸೆ ನೀಡಿದ್ದಾರೆ. ಆರ್​.ಶಂಕರ್ ಸೇರಿ ನಮ್ಮಿಬ್ಬರಿಗೂ ಮೇ ಅಥವಾ ಜೂನ್​​ನಲ್ಲಿ ಸ್ಥಾನಮಾನ ನೀಡಲಿದ್ದಾರೆ‌ ಎಂದರು.

ಈಗ ಗೆದ್ದ 10 ಜನ ಶಾಸಕರು ಮತ್ತು ಬಿಜೆಪಿಯ ಮೂವರು ಶಾಸಕರನ್ನು ಮಂತ್ರಿ ಮಾಡಲಿದ್ದಾರೆ‌. ಯಡಿಯೂರಪ್ಪ ನಮ್ಮ ನಾಯಕರು. ನಾವು ಅವರನ್ನು ನಂಬಿ ರಾಜೀನಾಮೆ ನೀಡಿ ಬಂದಿದ್ದೇವೆ. ಅವರು ಮಾತು ನೀಡಿದ್ದಾರೆ, ಅದರಂತೆ ನಡೆದುಕೊಳ್ಳಲಿದ್ದಾರೆ. ನಮಗೆ ಬಿಎಸ್​ವೈ ಮೇಲೆ ಯಾವುದೇ ಅನುಮಾನವಿಲ್ಲ. ಈವರೆಗೂ ನಮ್ಮ ಕೆಲಸಗಳನ್ನು ಮಾಡಿ ಕೊಟ್ಟಿದ್ದಾರೆ. ಇದೊಂದು ಕೆಲಸ ಬಾಕಿ ಇದ್ದು, ಅದು ಕೂಡ ಶೀಘ್ರದಲ್ಲಿ ಆಗಲಿದೆ ಎಂದರು.

ABOUT THE AUTHOR

...view details