ಬೆಂಗಳೂರು:ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದಲ್ಲಿ ನಿಲ್ಲಿಸದಿದ್ದಲ್ಲಿ ಕಾಂಗ್ರೆಸ್ ನಾಯಕರು ನಡೆಸಿರುವ ಅಕ್ರಮಗಳನ್ನು ಬಯಲಿಗೆಳೆಯುವುದು ಅನಿವಾರ್ಯವಾಗಲಿದೆ ಎಂದು ಅನರ್ಹ ಶಾಸಕ ಎನ್ . ನಾಗರಾಜ್ ಎಚ್ಚರಿಸಿದ್ದಾರೆ.
ನನ್ನ ತೇಜೋವಧೆಗೆ ಪ್ರಯತ್ನಿಸಿದಲ್ಲಿ, ಕಾಂಗ್ರೆಸ್ಸಿಗರ ಬಂಡವಾಳ ಬಯಲು: ಎಂಟಿಬಿ ಎಚ್ಚರಿಕೆ - ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸುದ್ದಿ
ಕಾಂಗ್ರೆಸ್ ಪಕ್ಷದವರು ತಮ್ಮ ಬಳಿ ಹಣದ ಭಿಕ್ಷೆ ಬೇಡಿ ಚುನಾವಣೆಗೆ ಸ್ಪರ್ಧಿಸಿದ್ದವರು ಇಂದು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಹೇಳಿದ್ದಾರೆ.
ನಗರದ ಎಂಟಿಬಿ ಭವನದಲ್ಲಿ ನಡೆದ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು , ಕಾಂಗ್ರೆಸ್ ಪಕ್ಷದವರು ತಮ್ಮ ಬಳಿ ಹಣದ ಭಿಕ್ಷೆ ಬೇಡಿ ಚುನಾವಣೆಗೆ ಸ್ಪರ್ಧಿಸಿದ್ದವರು ಇಂದು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ . ಚುನಾವಣೆಗಾಗಿ ರಾಜಕೀಯ ಮಾಡಬೇಕೆ ಹೊರತು ತೇಜೋವಧೆಗೆ ಪ್ರಯತ್ನಿಸಿದರೆ ತಿರುಗೇಟು ನೀಡುವುದು ತಮಗೂ ತಿಳಿದಿದೆ ಎಂದು ಖಾರವಾಗಿ ನುಡಿದಿದ್ದಾರೆ .
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅಭಿಮಾನವಿದ್ದರೂ ಸಹ, ಸ್ವಾಭಿಮಾನಕ್ಕೆ ಧಕ್ಕೆ ಮಾಡಲು ಪ್ರಯತ್ನಿಸಿದರೆ ವಿರೋಧ ವ್ಯಕ್ತಪಡಿಸುವುದು ಅನಿವಾರ್ಯವಾಗಲಿದೆ . ನನ್ನನ್ನು ಪಕ್ಷ ದ್ರೋಹಿ ಎಂದು ಹೇಳುವ ಕೃಷ್ಣ ಬೈರೇಗೌಡರು ಹಿಂದೆ ಯಾವ ಪಕ್ಷಲ್ಲಿದ್ದರು...? ಅವರ ತಂದೆ ನಂತರ ಮಾಡಿರುವ ರಾಜಕಾರಣ ಎಲ್ಲರಿಗೂ ತಿಳಿದಿದೆ. ಇವರು ಸಚಿವರಾಗಿದ್ದಾಗ ಕೃಷಿ ಹೊಂಡಗಳ ಬಗ್ಗೆ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸಿದಲ್ಲಿ ಮುಖವಾಡ ಕಳಚಿ ಬೀಳಲಿದೆ ಎಂದಿದ್ದಾರೆ.