ಕರ್ನಾಟಕ

karnataka

ETV Bharat / state

ಕೆಆರ್‌​ ಪುರ ಇನ್ಸ್​ಪೆಕ್ಟರ್​ ಸಾವು: ಪೊಲೀಸ್ ಆಯುಕ್ತರ ವಿರುದ್ಧ ಸಚಿವ ಎಂಟಿಬಿ ಗರಂ - KRpur police station inspecter nandish

ಕೆಆರ್​ಪುರ ಪೊಲೀಸ್ ಠಾಣಾ ಇನ್ಸ್​ಪೆಕ್ಟರ್​ ನಂದೀಶ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರಿಂದ ಸಚಿವ ಎಂಟಿಬಿ ನಾಗರಾಜ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಸಚಿವ ಎಂಟಿಬಿ ನಾಗರಾಜ್
ಸಚಿವ ಎಂಟಿಬಿ ನಾಗರಾಜ್

By

Published : Oct 27, 2022, 10:33 PM IST

Updated : Oct 28, 2022, 2:27 PM IST

ಕೆಆರ್ ಪುರ (ಬೆಂಗಳೂರು):ಕೆಲ ದಿನಗಳ ಹಿಂದಷ್ಟೆ ಪಬ್​ವೊಂದರ ವಿಚಾರವಾಗಿ ಅಮಾನತುಗೊಂಡಿದ್ದ ವೈಟ್ ಫೀಲ್ಡ್ ವಿಭಾಗದ ಕೆಆರ್​ ಪುರ ಪೊಲೀಸ್ ಠಾಣಾ ಇನ್ಸ್​ಪೆಕ್ಟರ್​ ನಂದೀಶ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದು, ಸಚಿವ ಎಂಟಿಬಿ ನಾಗರಾಜ್ ಹಾಗೂ ಮಾಜಿ ಸಚಿವ ಹೆಚ್ ವಿಶ್ವನಾಥ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ಕೆಆರ್ ಪುರ ಶ್ರೀ ಲಕ್ಷ್ಮಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂದೀಶ್ ಅವರನ್ನು ಕೆಲ ದಿನಗಳ ಹಿಂದಷ್ಟೇ ಪಬ್‌ವೊಂದರ ವಿಚಾರವಾಗಿ ಅಮಾನತುಗೊಳಿಸಿದ್ದಕ್ಕೆ ಕಿಡಿಕಾರಿದರು.

ಕೆಆರ್‌​ ಪುರ ಇನ್ಸ್​ಪೆಕ್ಟರ್​ ಸಾವು

ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳು ಒತ್ತಡದ ಜೀವನ ಸಾಗಿಸುತ್ತಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದ ನಂದೀಶ್ ಮತ್ತೆ ಬರಲು ಸಾಧ್ಯವಿಲ್ಲ. ಮೃತನ ಕುಟುಂಬಕ್ಕೆ ಸರ್ಕಾರ ಏನೇ ಮಾಡಿದ್ರೂ ಜೀವ ಕೊಡಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ:ಮೃತ ಮಗನ ಪಾಲಿನ ಆಸ್ತಿಯಲ್ಲಿ ವಿಧವೆ ತಾಯಿಗೂ ಪಾಲು ನೀಡಬೇಕು: ಹೈಕೋರ್ಟ್

Last Updated : Oct 28, 2022, 2:27 PM IST

ABOUT THE AUTHOR

...view details