ಹೊಸಕೋಟೆ:ಉಪಚುನಾವಣೆಯಲ್ಲಿ ಹೊಸ ಕೋಟೆ ಮತದಾರರನ್ನು ಸೆಳೆಯಲು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, ದಸರಾ ಗಿಫ್ಟ್ ನೀಡುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ತಾವರೆಕೆರೆ ಹಾಗೂ ಶಿವನಾಪುರ ಗ್ರಾಮದ ಜನರಿಗೆ ಎಂಟಿಬಿ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಕಂಬಳಿ ಹಾಗೂ ಬಿರಿಯಾನಿ ನೀಡಿದ್ದಾರೆ. ಕೂಪನ್ ಹಿಡಿದು ಸಾಲು ಸಾಲಾಗಿ ನಿಂತಿದ್ದ ಜನರಿಗೆ ಸ್ವತಃ ನಾಗರಾಜ್ರವರೆ ಮಹಿಳೆಯರಿಗೆ ಸೀರೆ ಮತ್ತು ಪುರುಷರಿಗೆ ಕಂಬಳಿಯನ್ನು ನೀಡಿದರು. ಇತ್ತ ಸೀರೆ, ಕಂಬಳಿಯನ್ನ ಪಡೆಯಲು ಮುಗಿಬಿಳುತ್ತಿದ್ದ ಜನರನ್ನು ಪೊಲೀಸರು ನಿಯಂತ್ರಿಸಲು ಹರಸಹಾಸ ಪಟ್ಟರು.
ಮತದಾರರಿಗೆ ಎಂಟಿಬಿ ಭರ್ಜರಿ ದಸರಾ ಗಿಪ್ಟ್ ಅನರ್ಹ ಶಾಸಕ ಎಂಟಬಿ ನಾಗರಾಜ್ ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಕೈಹಿಡಿದಿರೋ ಹಿನ್ನಲೆ ಕ್ಷೇತ್ರಾದ್ಯಂತ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ. ಅದರಲ್ಲೂ ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಉಪಚುನಾವಣೆ ದಿನಾಂಕ ನಿಗದಿ ಮಾಡಿದ್ದು, ನೀತಿ ಸಂಹಿತೆ ಜಾರಿಯಾಗುವ ಮುನ್ನ ಕ್ಷೇತ್ರದ ಮತದಾರರಿಗೆ ಎಂಟಿಬಿ ಹುಟ್ಟು ಹಬ್ಬದ ನೆಪದಲ್ಲಿ ಭರ್ಜರಿ ದಸರಾ ಗಿಪ್ಟ್ ನೀಡುತ್ತ ಸೈಲೆಂಟಾಗಿ ಪ್ರಚಾರ ನಡೆಸುತ್ತಿದ್ದಾರೆ, ಅನ್ನೊ ಮಾತು ರಾಜ್ಯ ರಾಜಕೀಯ ವಲಯದಲ್ಲಿ ಕೇಳಿಬಂದಿದೆ.
ಹೀಗೆ ದಸರಾ ಗಿಫ್ಟ್ ನಿಡ್ತಿರೋ ಎಂಟಿಬಿ ನಾಗರಾಜ್ ಉಪಚುನಾವಣೆಯಲ್ಲಿ ಮತದಾರರಿಗೆ ಹತ್ತಿರವಾಗಲು ಈ ರೀತಿಯ ಆಮಿಷ ಒಡ್ಡುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಸೀರೆ ಕಂಬಳಿಗಳನ್ನ ವಿತರಿಸಿದ ನಂತರ ಮಾತನಾಡಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಪ್ರತಿವರ್ಷ ನನ್ನ ಹುಟ್ಟು ಹಬ್ಬಕ್ಕೆ ಸೀರೆ ಹಾಗೂ ಕಂಬಳಿಯನ್ನ ವಿತರಿಸುತ್ತಿದ್ದೆ. ಆದ್ರೆ ಕಳೆದ ವರ್ಷ ಹುಟ್ಟು ಹಬ್ಬಕ್ಕೆ ವಿತರಿಸಲಿಲ್ಲ. ಹೀಗಾಗಿ ಈ ವರ್ಷ ಇಲ್ಲಿಗೆ ಆಗಮಿಸಿ ಸೀರೆ ಕಂಬಳಿ ವಿತರಿಸುತ್ತಿದ್ದೇನೆ ಎಂದರು.
ಒಟ್ಟಾರೆ ಪ್ರತಿಷ್ಠೆಯ ಕಣವಾಗಿರುವ ಹೊಸಕೋಟೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಲು ಬಯಸಿರೋ ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡರನ್ನ ಮಣಿಸಲು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಈಗಿನಿಂದಲೇ ಭರ್ಜರಿ ತಯಾರಿ ಮಾಡಿಕೊಳ್ತಿದ್ದಾರೆ. ಇನ್ನೂ ಉಪಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದಯ ಹಠಕ್ಕೆ ಬಿದ್ದಿರುವ ಎಂಟಿಬಿ ಹುಟ್ಟು ಹಬ್ಬ ಹಾಗೂ ದಸರಾ ನೆಪದಲ್ಲಿ ಮತದಾರರಿಗೆ ಆಮಿಷ ಒಡ್ಡುತ್ತಿರೋದು ಸಾರ್ವಜನೀಕರ ಟೀಕೆಗೆ ಗುರಿಯಾಗಿದೆ.