ಬೆಂಗಳೂರು:ಅವರೇನು ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪನವರಾ? ಅವರ ಬಗ್ಗೆ ಮಾತನಾಡೋಕೆ ಅವರೇನು ದೊಡ್ಡ ಮನುಷ್ಯರಾ ಎಂದು ಸಿ.ಪಿ ಯೋಗೇಶ್ವರ್ ಬಗ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಯೋಗೇಶ್ವರ್ ಏನು ದೊಡ್ಡ ಮನುಷ್ಯನಾ, ಅವರು ಯಾರು ಅಂತಾನೇ ನನಗೆ ಗೊತ್ತಿಲ್ಲ: ರೇಣುಕಾಚಾರ್ಯ ಕಿಡಿ - mp renukacharya meets nalin kumar katil
ನನಗೆ ಯೋಗೇಶ್ವರ್ ಯಾರು ಅಂತಾನೇ ಗೊತ್ತಿಲ್ಲ, ಆ ವ್ಯಕ್ತಿ ಹೆಸರು ಸಹ ನಾನು ಹೇಳಲ್ಲ. ಅವರೇನು ಮೋದಿಯವ್ರಾ?, ಅಮಿತ್ ಶಾ ಅವರಾ? ನಡ್ಡಾ ಅಥವಾ ಯಡಿಯೂರಪ್ಪನವರಾ? ಅವರ ಬಗ್ಗೆ ಮಾತಾಡೋಕ್ಕೆ ಅವರೇನು ದೊಡ್ಡ ಮನುಷ್ಯನಾ ಎಂದು ಸಿ.ಪಿ. ಯೋಗೇಶ್ವರ್ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಗುಡುಗಿದ್ದಾರೆ.
ಬಿಜೆಪಿ ಕಚೇರಿಗೆ ರೇಣುಕಾಚಾರ್ಯ ಭೇಟಿ ನೀಡಿ, ರಾಜ್ಯಾಧ್ಯಕ್ಷ ನಳಿನ್ ಕಮಾರ್ ಕಟೀಲ್ ಜೊತೆ ಮಾತುಕತೆ ನಡೆಸಿದರು. ಸಿ.ಪಿ ಯೋಗೇಶ್ವರ್ಗೆ ಸಚಿವ ಸ್ಥಾನ ನೀಡುವುದಕ್ಕೆ ನೇರವಾಗಿಯೇ ಅಸಮಾಧಾನ ಹೊರಹಾಕಿದ್ರು. ಕಟೀಲ್ ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಗ್ರಾಮ ಪಂಚಾಯತ್ ಮತ್ತು ಪಕ್ಷ ಸಂಘಟನೆ ವಿಚಾರ ಕುರಿತು ಚರ್ಚೆ ಮಾಡಿದ್ದೇವೆ. ಏನು ಹೇಳಬೇಕೋ ಹೇಳಿದ್ದೇನೆ, ರಾಜ್ಯಾಧ್ಯಕ್ಷರ ಜೊತೆ ಆರೋಗ್ಯಕರ ಚರ್ಚೆ ಆಗಿದೆ, ನಾನು ಏನು ಮಾತಾಡಬೇಕೋ ಅದನ್ನು ಮಾತಾಡಿದ್ದೇನೆ. ಮತ್ತೊಮ್ಮೆ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ, ಸಿಎಂ ಯಡಿಯೂರಪ್ಪ ಅವರನ್ನೂ ಭೇಟಿ ಮಾಡಿ ಅವರ ಜೊತೆಗೂ ಚರ್ಚೆ ಮಾಡುತ್ತೇವೆ ಎಂದರು.
ಆ ವ್ಯಕ್ತಿ ಹೆಸರೂ ಸಹ ನಾನು ಕೇಳಿಲ್ಲ, ನನಗೆ ಯೋಗೇಶ್ವರ್ ಯಾರು ಅಂತಾನೇ ಗೊತ್ತಿಲ್ಲ, ಆ ವ್ಯಕ್ತಿ ಹೆಸರು ಸಹ ನಾನು ಹೇಳಲ್ಲ. ಅವರೇನು ಮೋದಿಯವ್ರಾ?, ಅಮಿತ್ ಶಾ ಅವರಾ?ನಡ್ಡಾ ಅಥವಾ ಯಡಿಯೂರಪ್ಪನವರಾ? ಅವರ ಬಗ್ಗೆ ಮಾತಾಡೋಕ್ಕೆ ಅವರೇನು ದೊಡ್ಡ ಮನುಷ್ಯನಾ ಎಂದು ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಗುಡಗಿದರು.
ನಾವು ಯಾವುದೇ ರೆಸಾರ್ಟ್ಗೆ ಹೋಗಿಲ್ಲ. ಮನೆಯಲ್ಲಿ ಕಾಫಿ, ತಿಂಡಿ ಜೊತೆಗೆ ಶಾಸಕರೊಂದಿಗೆ ಚರ್ಚೆ ಮಾಡಿದ್ದೇವೆ ಅಷ್ಟೆ. ಯೋಗೇಶ್ವರ್ ಸಂಪುಟದಲ್ಲಿ ಸ್ಥಾನ ಪಕ್ಕ ಎಂಬ ಸಿಎಂ ಹೇಳಿಕೆಯಿಂದ ಆಘಾತ ಆಗಿದೆ, ಶಾಸಕಾಂಗ ಪಕ್ಷದ ಸಭೆಯಲ್ಲಿ ಮತ್ತೆ ಮಾತನಾಡುತ್ತೇನೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.