ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಭೇಟಿ ಬಳಿಕವೂ ಬಿಜೆಪಿ ನಾಯಕರ ವಿರುದ್ದ ತಮ್ಮ ಟೀಕಾಪ್ರಹಾರ ಮುಂದುರಿಸಿರುವ ಎಂ.ಪಿ. ರೇಣುಕಾಚಾರ್ಯ, ಯಡಿಯೂರಪ್ಪರನ್ನು ಷಡ್ಯಂತ್ರ ಮಾಡಿ ಎರಡು ಬಾರಿ ಅಧಿಕಾರದಿಂದ ಇಳಿಸಿದರು ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಮಾತನಾಡಿದ ಅವರು, ಬಿಎಸ್ ವೈ ಪಾದಯಾತ್ರೆ ಪ್ರತಿಫಲವಾಗಿ ಬಿಜೆಪಿ ಈ ಮಟ್ಟಕ್ಕೆ ಬೆಳೆದಿದೆ. ಅವರು ಬಿಜೆಪಿಯ ಅಗ್ರಮಾನ್ಯ ನಾಯಕ. ಅಂತಹವರನ್ನು ಷಡ್ಯಂತ್ರ ಮಾಡಿ ಎರಡು ಬಾರಿ ಇಳಿಸಿದ್ರು. ಕಾಂಗ್ರೆಸ್ - ಜೆಡಿಎಸ್ ನವರು ಯಡಿಯೂರಪ್ಪ, ಮೋದಿ ನೋಡಿ ಪಕ್ಷಕ್ಕೆ ಬಂದರು. ಅವರನ್ನು ಉಪ ಚುನಾವಣೆಗಳಲ್ಲಿ ಗೆಲ್ಲಿಸಿದರು. ಅಂತಹ ನಾಯಕರ ವಿರುದ್ಧ ಮಾತಾಡಿದ್ರೆ ನೋಟಿಸ್ ಇಲ್ಲ. ಯಡಿಯೂರಪ್ಪ ನಮ್ಮ ನಾಯಕರು, ಗೌರವ ಕೊಡ್ತೇನೆ ಎಂದರು.
ಅವರಿಗೆ ಅವಮಾನ, ಅಪಮಾನ ಮಾಡಿದ್ರು. ಬಿಎಸ್ ವೈ ಪಾಪ ಗೌರವದಿಂದ ರಾಜೀನಾಮೆ ನೀಡಿದ್ರು. ಇನ್ನು ಮೈಸೂರು ಸಂಸದರದ್ದು ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಆಗಿದೆ. ಒಬ್ಬ ಮಹಾನ್ ನಾಯಕನಿಗೆ ಅಪಮಾನ ಮಾಡೋದು ಸರಿಯಲ್ಲ ಎಂದು ರೇಣುಕಾಚಾರ್ಯ ಕಿಡಿಕಾರಿದರು.
ನೋಟಿಸ್ಗೆ ಹೆದುರುವುದಿಲ್ಲ:ನೋಟಿಸ್ಗೆಲ್ಲಾ ನಾನು ಹೆದರಿ ಬಿಡ್ತೀನಾ?. ನಂಗೆ ನೋಟೀಸ್ ಕೊಟ್ಟಿರೋದನ್ನು ಹೇಳ್ತೀರಿ. ಕಟೀಲ್ ಹೇಳ್ತಾರೆ 11 ಮಂದಿಗೆ ನೋಟೀಸ್ ಕೊಟ್ಟಿದ್ದೀವೆ ಅಂತ. ಉಳಿದ ಹತ್ತು ಮಂದಿ ಯಾರು..? ಎಲ್ಲಿ ನೋಟೀಸ್ ಕೊಟ್ಟಿದ್ದೀರಿ ಎಂದು ಮತ್ತೆ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.