ಬೆಂಗಳೂರು: ಪ್ರತಾಪ್ ಸಿಂಹ ತಮ್ಮ ಟ್ವಿಟರ್ ಹಾಗೂ ಫೇಸ್ಬುಕ್ ಮೂಲಕ ಪ್ರಕಾಶ್ ರೈಗೆ ಬಹಿರಂಗ ಕ್ಷಮೆಯಾಚಿಸಿದ್ದಾರೆ. ಇನ್ನು ಪ್ರತಾಪ್ ಸಿಂಹ ಕ್ಷಮೆಯಾಚನೆಗೆ ಸ್ಪಂದಿಸಿರುವ ಪ್ರಕಾಶ್ ರೈ, ನಾವಿಬ್ಬರು ಉನ್ನತ ಸ್ಥಾನದಲ್ಲಿದ್ದು, ಈ ರೀತಿ ಮಾಡುವುದು ತಪ್ಪು. ನಮ್ಮ ತತ್ವ, ಸಿದ್ಧಾಂತಗಳಲ್ಲಿ ತುಂಬಾ ವ್ಯತ್ಯಾಸ ಇರಬಹುದು. ಆದರೆ, ಅದು ವೈಯುಕ್ತಿಕ ಹಾಗೂ ಇನ್ನಿತರ ವಿಷಯಕ್ಕೆ ವೇದಿಕೆ ಆಗಬಾರದು. ಸಾಮಾಜಿಕ ಜಾಲತಾಣವನ್ನು ಈ ರೀತಿ ಉಪಯೋಗಿಸಿಕೊಳ್ಳಬಾರದು ಪ್ರಕಾಶ್ ರೈ ಮರು ಟ್ವೀಟ್ ಮಾಡಿದ್ದಾರೆ.
ಪ್ರಕಾಶ್ ರೈಗೆ ಟ್ವಿಟರ್ ಮೂಲಕ ಕ್ಷಮೆಯಾಚಿಸಿದ ಸಂಸದ ಪ್ರತಾಪ್ ಸಿಂಹ - Sinha apologizes to actor Prakash Rai
ಅವಹೇಳನಕಾರಿಯಾಗಿ ನಟ ಪ್ರಕಾಶ್ ರೈ ವಿರುದ್ಧ ಟ್ವೀಟ್ ಹಾಗೂ ಫೇಸ್ಬುಕ್ ಪೋಸ್ಟ್ ಮಾಡಿದ್ದ ಸಂಸದ ಪ್ರತಾಪ್ ಸಿಂಹ ಕ್ಷಮೆಯಾಚಿಸಿದ್ದಾರೆ. 2017ರಲ್ಲಿ ಆ ರೀತಿ ಬರೆದಿದ್ದು ತಪ್ಪಾಗಿದೆ ಎಂದು ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ರಕಾಶ್ ರೈ ಹಾಗೂ ಪ್ರತಾಪ್ ಸಿಂಹ
2017ರ ಅಕ್ಟೋಬರ್ನಲ್ಲಿ ಪ್ರತಾಪ್ ಸಿಂಹ ತಮ್ಮ ಟ್ವಿಟರ್ ಹಾಗೂ ಫೇಸ್ಬುಕ್ನಲ್ಲಿ ನಟ ಪ್ರಕಾಶ್ ರೈ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದರು.ಈ ಕಾರಣದಿಂದ ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ ₹1 ಮಾನನಷ್ಟ ಮೊಕದ್ದಮೆಯನ್ನ ಮೈಸೂರಿನ ನ್ಯಾಯಲಯದಲ್ಲಿ ದಾಖಲಿಸಿದ್ದರು. ನಂತರ ಈ ಪ್ರಕರಣ ಸಂಬಂಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚರಾಣೆ ನಡೆಯುತ್ತಿತ್ತು. ಹಲವಾರು ಬಾರಿ ಪ್ರತಾಪ್ ಸಿಂಹ ವಿಚಾರಣೆಗೆ ಹಾಜರಾಗಿದ್ದರು. ಈಗ ಕ್ಷಮೆಯಾಚನೆ ಮಾಡಿದ್ದಾರೆ.