ಕರ್ನಾಟಕ

karnataka

ETV Bharat / state

ಮ್ಯಾನುವಲ್​ ರೈಲ್ವೆ ಗೇಟ್​ಗಳಿಂದ ಮುಕ್ತಿ ಕೊಡಿ: ಲೋಕಸಭೆಯಲ್ಲಿ ಪಿಸಿ ಮೋಹನ್​ ಮನವಿ - ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು ನಗರದೊಳಗಿರುವ 26 ಮ್ಯಾನುವಲ್ ರೈಲ್ವೆ ಗೇಟ್​ಗಳನ್ನು ತೆಗೆದು ಹಾಕಬೇಕೆಂದು ಸಂಸದ ಪಿ ಸಿ ಮೋಹನ್ ಲೋಕಸಭೆಯಲ್ಲಿಂದು​ ಒತ್ತಾಯಿಸಿದ್ದಾರೆ.

mp-pc-mohan-urge-the-eliminate-of-lc-gates-in-bengaluru
ಬೆಂಗಳೂರಿನಲ್ಲಿ ಮ್ಯಾನುವಲ್​ ರೈಲ್ವೆ ಗೇಟ್​ಗಳಿಗೆ ಮುಕ್ತಿ ಕೊಡಿ: ಲೋಕಸಭೆಯಲ್ಲಿ ಪಿಸಿ ಮೋಹನ್​ ಮನವಿ

By

Published : Dec 15, 2022, 4:41 PM IST

ನವ ದೆಹಲಿ: ರಾಜಧಾನಿ ಬೆಂಗಳೂರಿನಲ್ಲಿ ಮಾನವ ಚಾಲಿತ(ಮ್ಯಾನುವಲ್) 26 ರೈಲ್ವೆ ಗೇಟ್​ಗಳಿದ್ದು, ಇವು ವಾಹನಗಳ ಸಂಚಾರ ದಟ್ಟಣೆಗೆ ಕಾರಣವಾಗಿದೆ. ಆದ್ದರಿಂದ ಆದಷ್ಟು ಬೇಗ ಈ ಗೇಟ್​ಗಳನ್ನು ತೆಗೆದುಹಾಕಬೇಕೆಂದು ಲೋಕಸಭೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದ ಬಿಜೆಪಿ ಸಂಸದ ಪಿ ಸಿ ಮೋಹನ್​ ರೈಲ್ವೆ ಇಲಾಖೆಗೆ ಮನವಿ ಮಾಡಿದರು.

ಮ್ಯಾನುವಲ್​ ರೈಲ್ವೆ ಗೇಟ್​ಗಳ ಸಮಸ್ಯೆ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಬೆಂಗಳೂರು ನಗರದೊಳಗೆ 26 ಮ್ಯಾನುವಲ್ ರೈಲ್ವೆ ಗೇಟ್​ಗಳಿವೆ. ಬಾಣಸವಾಡಿ-ಹೆಬ್ಬಾಳ ನಡುವೆ 6, ಕಾರ್ಮಲ್​ರಾವ್​ ಸ್ಟೇಷನ್​-ಬೈಯಪ್ಪನಹಳ್ಳಿ ಮಧ್ಯೆ 3 ಮತ್ತು ಯಲಹಂಕ, ಯಶವಂತಪುರ, ಚನ್ನಸಂದ್ರ ಹಾಗೂ ಕೆಂಗೇರಿ ಸೇರಿ ಹಲವೆಡೆ ಈ ಗೇಟ್​ಗಳು ಇವೆ ಎಂದರು.

ರೈಲ್ವೆ ಗೇಟ್​ಗಳ ಕಾರಣ ರೈಲು ಹಳಿಗಳ ಇಕ್ಕೆಲಗಳಲ್ಲಿ ವಾಹನಗಳು ಸರತಿ ಸಾಲು ಸಾಮಾನ್ಯವಾಗಿದೆ. ಹೀಗಾಗಿ, ಸವಾರರು ಸಾಕಷ್ಟು ಸಮಸ್ಯೆಗಳಲ್ಲಿ ಸಿಲುಕುತ್ತಿದ್ದಾರೆ. ಆದ್ದರಿಂದ ಮ್ಯಾನುವಲ್​ ರೈಲ್ವೆ ಗೇಟ್​ಗಳನ್ನು ತೆಗೆದುಹಾಕಿ ಸ್ವಯಂಚಾಲಿತ ಗೇಟ್​ಗಳ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.

'ಶಾಲಾ-ಕಾಲೇಜುಗಳಲ್ಲಿ ವೈಯಕ್ತಿಕ ಹಣಕಾಸು ನಿರ್ವಹಣೆಯ ಕೌಶಲ್ಯ ಕಲಿಸಿ':ಶಾಲಾ ಮತ್ತು ಕಾಲೇಜುಗಳಲ್ಲೇ ವಿದ್ಯಾರ್ಥಿಗಳಿಗೆ ವೈಯಕ್ತಿಕ ಹಣಕಾಸು ನಿರ್ವಹಣೆಯು ಕೌಶಲ್ಯಗಳನ್ನು ಕಲಿಸುವ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದರು. ಲೋಕಸಭಾ ಕಲಾಪದಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.

ದೊಡ್ಡ ಸಂಖ್ಯೆಯ ಯುವಜನತೆ ಮೊದಲ ಬಾರಿಗೆ ಉದ್ಯೋಗ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿರುತ್ತಾರೆ. ಆದರೆ, ಹಣಕಾಸು ನಿರ್ವಹಣೆಯ ಕೌಶಲ್ಯಗಳು ಅವರಿಗೆ ತಿಳಿದಿಲ್ಲ. ಯಾಕೆಂದರೆ, ಆರ್ಥಿಕ ನಿರ್ವಹಣೆಯ ಶಿಕ್ಷಣವನ್ನು ಶಾಲಾ ಮತ್ತು ಕಾಲೇಜುಗಳಲ್ಲಿ ಭಾಗವಾಗಿ ಕಲಿಸುವ ವ್ಯವಸ್ಥೆ ಇಲ್ಲ. ಹೀಗಾಗಿಯೇ ಯುವಕರಿಗೆ ಹಣದ ಮೌಲ್ಯ, ಆದಾಯದ ದರ, ವಿಮೆ, ಮ್ಯೂಚುವಲ್ ಫಂಡ್‌ಗಳು ಹಾಗೂ ನಿವೃತ್ತಿ ಯೋಜನೆ ಇತ್ಯಾದಿಗಳ ಬಗ್ಗೆ ಅರಿವಿಲ್ಲ. ಇದು ಅವರನ್ನು ಅನಿಶ್ಚಿತ ಆರ್ಥಿಕ ಪರಿಸ್ಥಿತಿಯಲ್ಲಿ ಇರಿಸುತ್ತದೆ ಮತ್ತು ಆರ್ಥಿಕ ವಂಚನೆಗಳಿಗೆ ಒಳಗಾಗುವಂತೆ ಮಾಡುತ್ತಿದೆ ಎಂದು ಹೇಳಿದರು.

ವೈಯಕ್ತಿಕ ಹಣಕಾಸು ನಿರ್ವಹಣೆಯು ನಿರ್ಣಾಯಕ ಜೀವನದ ಕೌಶಲ್ಯವಾಗಿದೆ. ಇದನ್ನು ಶಾಲಾ ಮತ್ತು ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕು. ಇದು ಶಾಲೆಯಲ್ಲಿ ಕಲಿಸಬೇಕಾದ ಜೀವನ ಕೌಶಲ್ಯ. ಇದರಿಂದ ಆರ್ಥಿಕ ಜೀವನವನ್ನು ಪರಿಣಾಮಕಾರಿಯಾಗಿ ಮುನ್ನಡೆಸಲು ಸಹಾಯವಾಗುತ್ತದೆ. ಜೊತೆಗೆ ಸಂಶಯಾಸ್ಪದ ಯೋಜನೆಗಳು, ಸಾಲದ ಆಮಿಷದ ಬಲೆಗಳಿಗೆ ಬಲಿಯಾಗುವುದನ್ನು ತಡೆಯುತ್ತದೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು.

ಇದನ್ನು ಓದಿ:ಆಮದು ಅಡಿಕೆಗೆ ಹೆಚ್ಚು ಸುಂಕ ವಿಧಿಸಿ, ಎಲೆಚುಕ್ಕೆ ರೋಗಕ್ಕೆ ಔಷಧಿ ಪರಿಚಯಿಸಿ: ಬಿ ವೈ ರಾಘವೇಂದ್ರ

ABOUT THE AUTHOR

...view details