ಬೆಂಗಳೂರು: ನಮ್ಮ ಪಕ್ಷದಲ್ಲಿ 75 ವರ್ಷ ಮಿತಿ ಮಾಡಿದ್ದು, ಬೇರೆ ಎಲ್ಲಾ ರಾಜ್ಯಗಳಲ್ಲಿ ವಯಸ್ಸಿನಂತೆ ಮಾಡಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಕೈಹಾಕಿಲ್ಲ ಎಂದು ಸಂಸದ ಜಿ.ಎಸ್.ಬಸವರಾಜು ಸೂಚ್ಯವಾಗಿ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನೆಹರು ಕಾಲದಲ್ಲಿ ಇದ್ದಂತೆ ಪರಿಸ್ಥಿತಿ ಈಗ ಇಲ್ಲ. ನಮ್ಮ ಪಕ್ಷದಲ್ಲಿ 75 ವರ್ಷ ಮಿತಿ ಮಾಡಿದೆ. ಬೇರೆ ಎಲ್ಲಾ ರಾಜ್ಯಗಳಲ್ಲಿ ವಯಸ್ಸಿನಂತೆ ಮಾಡಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ಮಾತ್ರ ಕೈ ಹಾಕಿಲ್ಲ. ಈಗ ಸಿಎಂ ಬದಲಾವಣೆ ಅನ್ನೋದು ಅನಿವಾರ್ಯವಲ್ಲ. ಸಿಎಂ ಟೀಂ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದರು.